Mind Sharing?

ಚಿತ್ರ: ಪಲ್ಲವಿ ಅನುಪಲ್ಲವಿ (1983)
ಗಾಯಕರು: ಎಸ್.ಜಾನಕಿ
ಸಂಗೀತ: ಇಳಯರಾಜ
ಸಾಹಿತ್ಯ: ಆರ್.ಎನ್. ಜಯಗೋಪಾಲ್

**********************************************************************************************************************************

ನಗು….. ಎಂದಿದೆ…
ಮಂಜಿನ….. ಬಿಂದು…..
ನಗು… ಎಂದಿದೆ….
ಮಂಜಿನ…. ಬಿಂದು….
ನಲಿ…. ಎಂದಿದೆ…
ಗಾಳಿ ಇಂದು….
ನಗು…. ಎಂದಿದೆ ….
ಮಂಜಿನ…. ಬಿಂದು
ಚಿಲಿಪಿಲಿ ಎಂದು
ಹಕ್ಕಿಯು ಹೇಳಿದೆ ಈಗ.. ಬಾ ಬಾ
ಜೊತೆಯಲಿ ಕೂಡಿ
ನಮ್ಮಂತೆ ಹಾರು ನೀ ಬೇಗ.. ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ..
ನನ್ನ ಸ್ನೇಹಿತನ..
ಇದೆ… ನಗುವ….
ಮನದ… ಸ್ಪಂದ…
ಸವಿ…..ಮಧುರ…..
ಮಮತೆ……ಬಂಧ……
ಆ.. ಆ..
ಆ.. ಆ..ಆ..ಆ…ಆ..
ತನನನನ ತನನಾನ
ತನನನನನನನನಾನ
ಆ..ಆ…ಆ…ಆ…
ಹಾಡುವ ಬಾ ಬಾ
ನದಿ ಅಲೆ ಕೊಡುವುದು ಜಾಗ
ಈಗ
ಕುಣಿಯುವ ಬಾ ಬಾ
ಮಳೆ ಹನಿ ತರುವುದು ತಾಳ
ಮೇಳ
ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು
ಇಂಥ ಅನುಬಂಧ
ಎಂಥ ಆನಂದ
ಇದೆ… ನಗುವ….
ಮನದ… ಸ್ಪಂದ…
ಸವಿ… ಮಧುರ….
ಮಮತೆ… ಬಂಧ…
ಇದೆ… ನಗುವ….
ಮನದ… ಸ್ಪಂದ…
Mind Sharing?