Mind Sharing?

ನೀವು ಏನಾದ್ರೂ Onde Ondu Sari Ninna Kannada Song Lyrics ಹುಡುಕುತ್ತಾ ಇದ್ದರೆ, ಸರಿಯಾದ ಜಾಗಕ್ಕೆ ಬಂದಿದ್ದೀರಿ.

ಈ ಚಂದ್ರಮುಖಿ ಪ್ರಾಣಸಖಿಗೆ ಚಿತ್ರದ ಸಾಹಿತ್ಯ ನಿಮಗಾಗಿ ಕನ್ನಡದಲ್ಲಿ ಮಾತ್ರ.

 

Onde Ondu Sari Ninna Kannada Song Lyrics Details:

ಹಾಡು: ಒಂದೇ ಒಂದು ಸಾರಿ ನಿನ್ನ ಕನ್ನಡ ಸಾಹಿತ್ಯ
ಚಿತ್ರ : ಚಂದ್ರ ಮುಖಿ ಪ್ರಾಣ ಸಖಿ(1999)
ಗಾಯನ: ಎಸ್.ಪಿ.ಬಿ, ಕೆ.ಎಸ್ ಚಿತ್ರ
ಸಂಗೀತ ನಿರ್ದೇಶನ: ಕೆ.ಕಲ್ಯಾಣ್
ರಚನೆ: ಕೆ.ಕಲ್ಯಾಣ್
ನಟರು: ರಮೇಶ್ ಅರವಿಂದ್, ಭಾವನಾ, ಪ್ರೇಮ

 

Modala Prema Patrave Lyrics in Kannada:

ಹೆಣ್ಣು: ಎಷ್ಟೋ ಹುಡುಗರ ಬಲ್ಲೆನು ನಾ
ಎಲ್ಲ ಹೇಳೊ ಟೊಳ್ಳು ಮಾತಿದು
ಇಂಥ ಸುಳ್ಳು ಪೊಳ್ಳು ಎಲ್ಲು ನಡೆಯದು

ಗಂಡು: ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೊದಾದರೆ
ಹೃದಯನ ಒಮ್ಮೆ ನೋಡು ಜಪವು ನಿನದೇ

ಹೆಣ್ಣು: ನೀ ಹುಟ್ಟಿದಾಗಿನಿಂದ
ನಿನ್ನ ಹೃದಯ ನೀನೆ ಕಂಡಿಲ್ಲ
ಕಾಣದ್ದು ಗೀಚದರೆ ಯಾರು ನಂಬಲ್ಲ

ಗಂಡು: ಬರಿ ಅಕ್ಷರ ಇಲ್ಲಮ್ಮ
ನನ್ನ ಏದುಸುರಿದೆಯಮ್ಮ
ಈ ಉಸಿರ ಸಾಲಿಗೆ ಹಾಳೆ ನೀನಮ್ಮ

ಹೆಣ್ಣು: ಹಾಳೆ ಹರಿಬಹುದು ನಾಳೆ ಮರಿಬಹುದು
ಈ ಆಗದ ಹೋಗದ ಮಾಗದ ಕಾಗದ
ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ

ಗಂಡು: ಒಂದೇ ಒಂದು ಸಾರಿ ನಿನ್ನ
ಕಂಡ ಒಡನೆ ಮರೆತೆ ನನ್ನ
ಮರೆತು ಕೂಡ ಮರೆಯಲಾರೆನಾ ನಿನ್ನ

ಗಂಡು: ಓ……….ಒಒ

ಹೆಣ್ಣು: ಓಒಒಓ… ಓಒಒಓ
ಗಂಡು: ಊ……ಉಉಊ
ಹೆಣ್ಣು: ಓಒಒಓ… ಓಒಒಓ ಓ ಒ ಒ

ಹೆಣ್ಣು: ಎಷ್ಟೋ ಕವಿಗಳ ಕಾಲೆಳೆದು
ಕಾಲು ತೊಳೆಯೋ ಪ್ರೀತಿ ಅಂತೀರಿ
ಆಮೇಲ್ ಕೈ ತೊಳೆದುಕೊಂಡು ಹೋಗ್ತೀರಿ

ಗಂಡು: ನನ್ನಾ ಪದಗಳಿವು ಪದವಲ್ಲ
ನನ್ನ ಎದೆ ಕದಗಳಿವು
ಒಳಗೆ ನಿಂದೆ ಪ್ರೀತಿ ಅಂತರಂಗವು

ಹೆಣ್ಣು: ಏನೆಂದರೇನು ಪ್ರೀತಿ ಕಣ್ಣು ಕುರುಡು
ಅನ್ನೋದು ಗಾದೆ
ಬೇಕಿಲ್ಲದಿದ್ದರೂನು ಬೇಡುತ ಇದೆ

ಗಂಡು: ಕಣ್ಣಾಗೊ ಪ್ರೀತಿ ನಂಬಿ
ನಿನ್ನ ಕಣ್ಣಾಗೊ ನಾನಮ್ಮ
ಕುರುಡಾದರೂನು ನಂದು ನೇರ ನಡೆಯಮ್ಮ

ಹೆಣ್ಣು: ಅಂದ ಹೊಗಳೋರು ಸಂಬಂಧ ಹುಡುಕೋರು
ಈ ಪ್ರೀತಿ ಅನ್ನೊರೆಲ್ಲ ಹುಚ್ಚರು

ಗಂಡು: ಯಾರೇನೆ ಅಂದರೂ ನೀ ನನ್ನ ಕೊಂದರು
ನಿನ್ ಪ್ರೀತಿ ಒಂದೆ ನನ್ನ ದೇವರು

ಹೆಣ್ಣು: ತಂದನ್ ನಾನ ತಾನ ನಾನ
ತಂದನ್ ನಾನ ತಾನ ನಾನ
ಮರೆತು ಕೂಡ ಮರೆಯಲಾರೆನಾ ನಿನ್ನ

ಗಂಡು: ಎಷ್ಟು ಸಾರಿ ನೋಡಿದರು
ಎಷ್ಟು ಸಾರಿ ಹಾಡಿದರು

ಹೆಣ್ಣು: ಸವಿಯದಂತ ಸವಿಯ ಕೊಡುವೆ ನಾ ಇನ್ನ

 

ನಮ್ ಕನ್ನಡ 360 ಯಲ್ಲಿ ಇತರೆ ಸಾಹಿತ್ಯ ಹಾಗೂ ಓದುವ ಅಂಕಣಗಳು:

ಇದನ್ನು ಹಾಡಿಕೊಳ್ಳಿ: ಈ ಸುಂದರ ಬೆಳದಿಂಗಳ-ಅಮೃತವರ್ಷಿಣಿ
ಇದನ್ನು ಹಾಡಿಕೊಳ್ಳಿ: ಮನಸೇ ಬದುಕು ನಿನಗಾಗಿ-ಅಮೃತವರ್ಷಿಣಿ
ಇದನ್ನು ಹಾಡಿಕೊಳ್ಳಿ: ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು-ಅಮೃತವರ್ಷಿಣಿ
ಇದನ್ನು ಹಾಡಿಕೊಳ್ಳಿ: ಕಾಗದದ ದೋಣಿಯಲ್ಲಿ ಸಾಹಿತ್ಯ 
ಇದನ್ನು ಓದಲೇ ಬೇಕು: ಓದಲೇ ಬೇಕಾದ ಕನ್ನಡ ಬೆಸ್ಟ್ ಬುಕ್ಸ್ ಕನ್ನಡದಲ್ಲಿ
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ

ಇದನ್ನು ಓದಿ: ಪ್ರಾಚೀನ ಭಾರತ-ಮೂಲಾಧಾರಗಳು
ಇದನ್ನು ಓದಿ: ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್
ಹಣ ಮಾಡುವ ವಿಧಾನ: ಆನ್ಲೈನ್ ಹಣ ಹೇಗೆ ಗಳಿಸುವುದು?

ಒಂದೇ ಒಂದು ಸಾರಿ ನಿನ್ನ ಹಾಡು ಇಷ್ಟು ಸಂಪೂರ್ಣವಾಗಿ hit ಆಗಿದ್ದಕ್ಕೆ ಕಾರಣ, ರಮೇಶ್ ಅರವಿಂದ್ ಹಾಗೂ ಭಾವನಾ ಅವರ ನಟನೆಯಿಂದ.

ಸಾಹಿತ್ಯ ಹಾಗೂ ಸಂಗೀತ, ಮನಸ್ಸು ಸೂರ್ಯಗೊಳಿಸುವಂತಹ ಮೂಡಿ ಮಾಡಿದ್ದು, ನಮ್ಮನ್ನೆಲ್ಲ ಮಂತ್ರ ಮುಕ್ತ ಆಗಿಸಿದೆ.

ನಿಮಗೆ ಮೊದಲ ಪ್ರೇಮ ಪತ್ರವೇ ಹಾಡಿನ ಸಾಹಿತ್ಯ ಇಷ್ಟವಾಗಿದ್ದರೆ, ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದು ಮರಿಬೇಡಿ.

ಸರ್ವೇ ಜನ ಸುಖಿನೋ ಭವಂತು 🙏

Mind Sharing?