Mind Sharing?

I know if you want to know about FIR, you have to see Fir Copy In Kannada.

ನಾವು ಏನೇ ವಿಷಯವನ್ನಾದರೂ ಗ್ರಹಿಸಬೇಕು ಎಂದರೆ, ನಾವು ನೋಡಿ ಕಲಿತುಕೊಳ್ಳುವುದು ಹೆಚ್ಚು ಅವಶ್ಯಕ.

ಆದ್ದರಿಂದ ನೀವು ತಿಳಿಯಲು ಬಯಸುವ ಎಫ್ಐಆರ್ ಬಗ್ಗೆ ಮಾಹಿತಿ ನಿಮಗೆ ಎಫ್ಐಆರ್ ಕಾಪಿ ತೋರಿಸಿ ನಿಮಗೆ ಎಫ್ ಐ ಆರ್ ಬಗ್ಗೆ ಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ.
ಇದನ್ನು ಓದಲೇಬೇಕು: ಕನ್ನಡದಲ್ಲಿ ಓದಲೇಬೇಕಾದ ಪುಸ್ತಕಗಳು

 

Fir Copy In Kannada | ಎಫ್ಐಆರ್ ಕಾಪಿ ಕನ್ನಡದಲ್ಲಿ:

ಈ ಎಫ್ ಐ ಆರ್ ದಾಖಲೆಗಳು, ಕೇವಲ ನಿಮಗೆ ತೋರಿಸಲು ಮಾತ್ರ ತೆಗೆದಿರುವ ಕಾಫಿ ಆಗಿದ್ದು ಇದನ್ನು ನೀವು ಯಾವುದೇ ಲೀಗಲ್ ವಿಷಯಕ್ಕೆ ಬಳಸಲು ಸಾಧ್ಯವಿಲ್ಲ.

Fir Copy In Kannada

Fir Meaning In Kannada

ಬೇರೆಯವರ ಪರ್ಸನಲ್ ಇನ್ಫರ್ಮೇಷನ್ ಹೊಂದಿರುವ ಎಫ್ಐಆರ್ ಕಾಫಿಯನ್ನು ನಿಮಗೆ ಪೂರ್ಣವಾಗಿ ತೋರಿಸಲು ಸಾಧ್ಯವಿಲ್ಲ.

ಆದ್ದರಿಂದ ನಿಮಗೆ ತಿಳಿಯುವಷ್ಟು ಮಾತ್ರ ನಿಮಗೆ ಕಾಪಿ ಹೇಗಿರುತ್ತದೆ ಎಂದು ತೋರಿಸಿದ್ದೇವೆ.

 

Fir Meaning In Kannada: ಎಫ್ಐಆರ್ ಎಂದರೇನು?

Fir Full Form In Kannada: ಫಸ್ಟ್ ಇನ್ಫಾರ್ಮಶನ್ ರಿಪೋರ್ಟ್

ಎಫ್ಐಆರ್ ಎಂದರೆ ಫಸ್ಟ್ ಇನ್ಫಾರ್ಮಶನ್ ರಿಪೋರ್ಟ್.

ಕನ್ನಡದಲ್ಲಿ ಎಫ್ ಐ ಆರ್ ಎಂದರೆ ಪ್ರಥಮ ವರ್ತಮಾನ ವರದಿ ಎಂದು ಕರೆಯುತ್ತಾರೆ.

ಎಫ್ಐಆರ್ ಯಾವಾಗ ಮಾಡುತ್ತಾರೆ ಎಂದು ಮುಂದೆ ತಿಳಿಸುತ್ತೇನೆ ದಯವಿಟ್ಟು ಕಾದಿರಿ.

ಈ ಎಫ್ ಐ ಆರ್ ನ ಅಡಿಯಲ್ಲಿ ಎಲ್ಲಾ ಕೇಸ್ಗಳಿಗೂ ಇದು ಅನ್ವಯವಾಗುವುದಿಲ್ಲ.

ಎಫ್ ಐ ಆರ್ ಎನ್ನುವುದನ್ನು ಕೇವಲ ಸಾಜ್ಞೇಯ ಕೇಸುಗಳಿದ್ದಾಗ ಮಾತ್ರ ದಾಖಲಿಸಲಾಗುತ್ತದೆ.
ಇದನ್ನು ಓದಲೇಬೇಕು: ಕನ್ನಡದಲ್ಲಿ ಓದಲೇಬೇಕಾದ ಪುಸ್ತಕಗಳು

 

ಸಾಜ್ಞೇಯ ಕೇಸ್ ಗಳು ಎಂದರೆ ಯಾವುದು? What are Cognizable cases for First Information Report In Kannada?

ಸಾಜ್ಞೇಯ ಮತ್ತು ಸಾಜ್ಞೇಯಯವಲ್ಲದ ಪ್ರಕರಣಗಳು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ಕೊಡುತ್ತೇನೆ.

ಸಾಜ್ಞೇಯ ಕೇಸುಗಳ ಅಡಿಯಲ್ಲಿ ಬರುವಂತಹ ಪ್ರಕರಣಗಳು ಎಂದರೆ ರೇಪ್, ಮರ್ಡರ್, ಡೊಮೆಸ್ಟಿಕ್ ವೈಲೆಂಸ್,  ಹೊಡೆದಾಟ, ಪಬ್ಲಿಕ್ ಆಸ್ತಿ ಹಾನಿ, ಅಟ್ಟೆಂಪ್ಟ್ ಟು ಮರ್ಡರ್, ಇತ್ಯಾದಿ.

ಸಾಜ್ಞೇಯ ವಲ್ಲದ ಪ್ರಕರಣಗಳ ಅಡಿಯಲ್ಲಿ ಬರುವಂತಹ ಪ್ರಕರಣಗಳು ಎಂದರೆ ಬಂದು ಬಾಂಧವರ ಕಲಹ, ಆಸ್ತಿ ವಿಷಯಗಳು, ಸಿವಿಲ್ ಕೇಸುಗಳು (ಮನೆ ವಿಸ್ತೀರ್ಣ ಹೆಚ್ಚಾಗಿಸಿ ಕಟ್ಟಿರುವುದು, ಅಕ್ಕ-ಪಕ್ಕದವರ ಮನೆ ಜಗಳ, ಮನೆ ಕಟ್ಟುತ್ತಿರುವಾಗ ಆದ ಹಾನಿಗಳು) ಇತ್ಯಾದಿ ಕೇಸುಗಳು, ಸಾಜ್ಞೇಯ ವಲ್ಲದ ಪ್ರಕರಣದ ಅಡಿಯಲ್ಲಿ ಬರುತ್ತವೆ.

 

Police Fir Meaning In Kannada: ಎಫ್ ಐ ಆರ್ ಯಾರು ಹಾಕಬಹುದು?

ಎಫ್ಐಆರ್ ಎಂದರೆ ಪ್ರಥಮ ವರ್ತಮಾನ ವರದಿ.

ಸಾಜ್ಞೇಯ ಪ್ರಕರಣಗಳ ಅಡಿಯಲ್ಲಿ ಬರುವಂತಹ ಪ್ರಕರಣ ಎಂದು ಪೊಲೀಸ್ ಇನ್ಸ್ಪೆಕ್ಟರ್ ಖಚಿತಪಡಿಸಿಕೊಂಡ ನಂತರ, SHO ಕೇಸ್ ಫೈಲ್ ಮಾಡಲು ಹಸಿರು ನಿಶಾನೆಯನ್ನು ತೋರಿಸುತ್ತಾರೆ.

ಈ ಎಫ್ ಐ ಆರ್ ಸಾಜ್ಞೇಯ ಪ್ರಕರಣಗಳ ಅಡಿಯಲ್ಲಿ ಬರುವಂತಹ ಪ್ರಕರಣಗಳು ಇದ್ದಾಗ ಪ್ರತಿ ಸ್ಟೇಷನ್ನಲ್ಲಿ SHO, ಸ್ಟೇಷನ್ ಹೆಡ್ ಕಾನ್ಸ್ಟೇಬಲ್ ನಿಮ್ಮ ಕೇಸಿನ ವಿವರಗಳನ್ನು ತೆಗೆದುಕೊಳ್ಳುತ್ತಾರೆ.

SHO, ನಿಮ್ಮ ದೂರನ್ನು ದಾಖಲಿಸಿಕೊಳ್ಳುತ್ತಾರೆ.

ಎಫ್ ಐ ಆರ್ ನಲ್ಲಿ ಏನೇನು ದಾಖಲಿಸಲಾಗುತ್ತದೆ: What included in Fir Copy In Kannada?

  1. ಕೇಸಿನ ಪೂರ್ಣ ವಿವರಗಳು
  2. ಸಂಬಂಧಿತ ವ್ಯಕ್ತಿಗಳು
  3. ಸಂಬಂಧಿತ ವ್ಯಕ್ತಿಗಳ ವಿವರ
  4. ಸಂಬಂಧಿತ ವ್ಯಕ್ತಿಗಳ ಅಡ್ರೆಸ್
  5. ಸದ್ಯಕ್ಕೆ ಇರುವ ಪುರಾವೆಗಳು
  6. A1, A2, A3, ಎಂದು ಆರೋಪಿ 1, ಆರೋಪಿ 2, ಆರೋಪಿ 3 (ಅಂದರೆ A1 ಮೊದಲ ಸಸ್ಪೆಕ್ಟ್ ಆಗಿರುತ್ತಾರೆ)

ಇದನ್ನು ಓದಲೇಬೇಕು: ಮನೆಯಿಂದ ಖಾತ್ರಿಯಾಗಿ ಹಣ ಹೇಗೆ ಗಳಿಸುವುದು?

 

What happens after the First Information Report In Kannada: ಎಫ್ ಐ ಆರ್ ದಾಖಲಾದ ನಂತರ ಏನಾಗುತ್ತದೆ?

ಎಫ್ ಐ ಆರ್ / ಪ್ರಥಮ ವರ್ತಮಾನ ವರದಿ ದಾಖಲಾದ ನಂತರ,

  1. ಕೇಸ್ ಫೈಲ್ ಮಾಡಿರುವವರಿಗೆ ಎಫ್ ಐ ಆರ್ ನ ಕಾಪಿ ಹಾಗೂ ಅಕ್ನಾಲಜಿಮೆಂಟ್ ಕೊಡುತ್ತಾರೆ.
  2. ಪೊಲೀಸರು ಈ ಕೇಸಿನ ವಿಚಾರಣೆ ಶುರು ಮಾಡುತ್ತಾರೆ.
  3. ನಂತರ FIR ಗೆ ಸಿಕ್ಕಿದ ಪುರಾವೆಗಳನ್ನು ಸೇರಿಸುತ್ತಾ ಹೋಗುತ್ತಾರೆ.
  4. ಎಫ್ಐಆರ್ ಫೈಲ್ ಆದ ನಂತರ, A1, A2, A3 ಎಲ್ಲಿ ಯಾರನ್ನಾದರೂ ಅರೆಸ್ಟ್/ದಸ್ತಗಿರಿ ಮಾಡಿದರೆ 24 ಗಂಟೆಗಳ ಒಳಗೆ, ಕೋರ್ಟ್ ನಲ್ಲಿ ಪ್ರೊಡ್ಯೂಸ್ ಮಾಡಲೇಬೇಕು.
  5. ನಂತರ ಜಡ್ಜ್ ಆರೋಪಿ ವಿರುದ್ಧ ದಾಖಲಾಗಿರುವ fir ನೋಡಿ ಆರೋಪಿಯನ್ನು ಕುಲಾಸೆ ಗೊಳಿಸಬಹುದು, ಇಲ್ಲವೇ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು.
  6. ಪೊಲೀಸರಿಗೆ ಅಕಸ್ಮಾತ್ ಬೇರೆಯವರು ಆರೋಪಿ ಎಂದು ಗುಮಾನಿಯಾದರೆ, ಅವರು ನ್ಯಾಯಾಂಗ ಬಂದನದಲ್ಲಿ ಇಲ್ಲದಿದ್ದರೆ, Warrant/ವಾರಂಟ್ ಇಲ್ಲವೇ Summons/ಸಮನ್ಸ್ ನೋಟಿಸ್ ಹೊರಡಿಸಲಾಗುತ್ತದೆ.
  7. ಇದರಿಂದ ಆರೋಪಿಯ ಬಂಧನ ಪೊಲೀಸರು ಕೈಗೊಳ್ಳಬಹುದು.
  8. ಆರೋಪಿಯ ವಿಚಾರಣೆ, ಹಾಗೂ ಹೆಚ್ಚಿನ ದಾಖಲೆಗಳು, ಹಾಗೂ ಮುಂದಿನ ಪುರಾವೆಗಳು ಎಲ್ಲವನ್ನು ಇಟ್ಟುಕೊಂಡು ಪೊಲೀಸರು ಚಾರ್ಜ್ ಶೀಟ್ ಹಾಗೂ B ರಿಪೋರ್ಟ್, ನ್ಯಾಯಾಲಯಕ್ಕೆ ಒದಗಿಸುತ್ತಾರೆ.
  9. ನಂತರ ಆರೋಪಿಗಳ ಬಗ್ಗೆ ಚಾರ್ಜ್ ಶೀಟ್ ಪೊಲೀಸರ ಫೈಲ್ ಮಾಡಿ ನ್ಯಾಯಾಂಗಕ್ಕೆ ಒಪ್ಪಿಸುತ್ತಾರೆ.
  10. ನಂತರ ಕೋರ್ಟಿನಲ್ಲಿ ಕೇಸಿನ ಟ್ರಯಲ್ ನಡೆಯುತ್ತದೆ.
  11. ಆರೋಪಿ ತಪ್ಪಿತಸ್ಥ ಎಂದು ಸಾಕ್ಷಿಗಳ ಮೂಲಕ ಜಡ್ಜ್ ಅವರಿಗೆ ತಿಳಿದರೆ, ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ, Fine ಹಾಗೂ ದಂಡನೆ ವಿಧಿಸಬಹುದಾಗಿದೆ.

 

What if Police Reject Filing FIR: ಪೊಲೀಸರು ಎಫ್ಐಆರ್ ಫೈಲ್ ಮಾಡದಿದ್ದರೆ ನೀವು ಏನು ಮಾಡಬೇಕು?

ಸಾಮಾನ್ಯ ಪೊಲೀಸರು FIR ಫೈಲ್ ಮಾಡುವುದನ್ನು ಆದಷ್ಟು ಮುಂದೆ ಹಾಕುತ್ತಾರೆ.

ಉದಾಹರಣೆಗೆ: ಯಾರಾದರೂ ಹೊಡೆದಾಟ ಆಡಿದ್ದರೆ, ಅವರ ಮಧ್ಯೆ ಮುಂದೆ ತೊಂದರೆ ಆಗದಂತೆ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳಿಸಿ ಕೊಡುತ್ತಾರೆ.

ನಿಮಗೆ ಈ FIR ಪೊಲೀಸರು ಮಾಡಲೇಬೇಕು ಎನ್ನುವುದಾದರೆ, ನೀವು ಅದನ್ನು ಖಂಡಿತವಾಗಿ ಪೊಲೀಸರಿಗೆ ಮುಂಚೆಯೇ ತಿಳಿಸಬೇಕಾಗುತ್ತದೆ.

ಎಫ್ ಐ ಆರ್ ನ ಮೊದಲು ಸಾಮಾನ್ಯ ವಾಗಿ LPT / Lower Petition ಫೈಲ್ ಮಾಡಲಾಗುತ್ತದೆ.

ದೂರು ನೀಡಿರುವವರು, ದೂರುವ ವ್ಯಕ್ತಿಯ ಬಗ್ಗೆ LPT ಫೈಲ್ ಮಾಡಿ ವಿಚಾರಣೆ ಕೈಗೊಳ್ಳುತ್ತಾರೆ.

ನಂತರ ಆದರೆ, ಇಬ್ಬರ ಮಧ್ಯೆ ಮುಚ್ಚಳಿಕೆ ಬರೆಸಿಕೊಂಡು LPT ಮುಚ್ಚಲಾಗುತ್ತದೆ.

LPT ಆದ ನಂತರವೂ, ವ್ಯಕ್ತಿಯ ಬಗ್ಗೆ ಮತ್ತೆ ದೂರು ಬಂದರೆ, ಆಗ ಎಫ್ಐಆರ್ ಫೈಲ್ ಮಾಡಲಾಗುತ್ತದೆ.

ಸಾಜ್ಞೇಯ ಪ್ರಕರಣಗಳ ಬಗ್ಗೆ ಎಫ್ಐಆರ್ ತಕ್ಷಣ ಫೈಲ್ ಆಗುತ್ತದೆ.

ಅಕಸ್ಮಾತ್ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದಲ್ಲಿ, ನೀವು, ಇನ್ಸ್ಪೆಕ್ಟರ್, ಸರ್ಕಲ್ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ACP), Deputy ಕಮಿಷನರ್ ಆಫ್ ಪೊಲೀಸ್(DCP), ಅಸಿಸ್ಟೆಂಟ್ ಕಮಿಷನರ್, ಇಲ್ಲವೇ ಕಮಿಷನರ್ ಆಫ್ ಪೊಲೀಸ್ (CP) ಅವರಿಗೆ ಲಿಖಿತ ದೂರು ನೀಡಿ FIR ದಾಖಲಿಸಲು ಕೇಳಬಹುದಾಗಿದೆ.

ಈಗ ಜನರ ಹಿತಕ್ಕಾಗಿ, ಯಾರು ಬೇಕಾದರೂ ಈ ಮೇಲ್ನ (eMail) ಮೂಲಕ ದೂರನ್ನು ಕೊಡಬಹುದಾಗಿದೆ.
ತಿಳಿಯಲೇಬೇಕಾದ್ದು: ಕನ್ನಡದ ಮೊದಲುಗಳ ಬಗ್ಗೆ ನಿಮಗೆಷ್ಟು ಗೊತ್ತು

 

Can Police Fir In Kannada be Filed Suo Moto: ಪೊಲೀಸರು ಖುದ್ದಾಗಿ FIR ಫೈಲ್ ಮಾಡಬಹುದೇ?

Heinous crimes / ಹೀನ ಕೃತ್ಯಗಳು ನಡೆದಾಗ, ಪೊಲೀಸರು ತಾವು ಖುದ್ದಾಗಿ FIR ಫೈಲ್ ಮಾಡಬಹುದು.

ಇದಕ್ಕೆ Suo Moto ಕೇಸ್/ಪ್ರಕರಣ ಎಂದು ಹೇಳುತ್ತಾರೆ.

ಹೀನ ಕೃತ್ಯಗಳು ಆದಾಗ, ತೊಂದರೆಗೊಳಗಾದ ವ್ಯಕ್ತಿ ಮಾತನಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಇಲ್ಲವೇ ಅವರ ಕಡೆ ಯಾರು ಪ್ರಕರಣ ದಾಖಲಿಸದಿದ್ದರೆ, Suo Moto ಎಫ್ಐಆರ್/FIR ಫೈಲ್ ಮಾಡಲಾಗುತ್ತದೆ.
ಇದು ನಿಮಗೆ ಗೊತ್ತೇ: ಆಕಳಿಕೆ ಬರಲು ಕಾರಣಗಳು ಮತ್ತು ಆಕಳಿಕೆ ಬಗ್ಗೆ ಕೆಲವು ಆಸಕ್ತಿದಾಯಕ ವಿಶೇಷಗಳು

 

ನಿಮಗೆ ಎಫ್ಐಆರ್ ಬಗ್ಗೆ ಪೂರ್ಣ ವಿವರಗಳನ್ನು ನೀಡಿದ್ದೇವೆ. ಇನ್ನು ಏನಾದರೂ ಮಾಹಿತಿ ಬೇಕಿದ್ದರೆ ಕಮೆಂಟ್ ನಲ್ಲಿ ತಿಳಿಸಿ.

ನಿಮಗೆ ಎಫ್ಐಆರ್ ಪೋಸ್ಟ್ ಇಷ್ಟವಾಗಿದ್ದರೆ, ನಿಮ್ಮ ಸೋಶಿಯಲ್ ಮೀಡಿಯಾ ಚಾನೆಲ್ ಗಳಲ್ಲಿ ಶೇರ್ ಮಾಡಿ.

ಹೆಚ್ಚಿನ ವಿವರಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

ಕಾಮೆಂಟ್ ನಲ್ಲಿ ನಿಮಗೆ ಏನ್ ಅನ್ನಿಸಿತು ಎಂದು ತಿಳಿಸುವುದು ಮರೆಯಬೇಡಿ.

ಸರ್ವೇ ಜನ ಸುಖಿನೋ ಭವಂತು 🙏

Mind Sharing?