ಚಿತ್ರ: ಗುಣ ನೋಡಿ ಹೆಣ್ಣುಕೊಡು (1982)
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ.ರಂಗರಾವ್
*********************************************************************************************************************************
ಗಂಡು: ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೇ
ನಗುತ ನೀ ಕರೆದರೇಏಏಏ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ಮಾತಲ್ಲಿ ಏನೊ ಹೊಸತನ
ಮಗುವನ್ನು ಹೋಲೊ ಹೂಮನ
ರಸ ಕಾವ್ಯ ನಿನ್ನ ಯೌವ್ವನ
ಎದೆ ತುಂಬಿ ನಿಂತೇ ಪ್ರತಿಕ್ಷಣ
ಹಳ್ಳಿ ಮಣ್ಣಲಿ
ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ
ಬಿರಿದ ಮಲ್ಲಿಗೇ
ಬೆರೆತೆ ಉಸಿರಲ್ಲಿ ಒಂದಾದಂತೆ
ಆ.. ಆ.. ಆ.. ಆ..
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ಆ…. ಆಆಆ..ಆಆ… ಆಆ..ಆ..
ಹೆಣ್ಣು: ಆಆಆ..ಆಆಆ..
ಆಆಅ… ಆಆಅ… ಆಆಅ…
ಗಂಡು: ಈ ನೀಲಿ ಕಣ್ಣ ಬೆಳಕಲಿ
ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ
ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು
ಬಾಳಲಾರೆನು
ಅಗಲಿ ನಿನ್ನನು
ಬಾಳಲಾರೆನು
ಜೀವ ಒಡಲಿಂದ ದೂರಾದಂತೆ
ಹೆಣ್ಣು: ಆ.. ಆ.. ಆ.. ಆ..
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ಗಂಡು: ನಗುತ ನೀ ಕರೆದರೆ
ಹೆಣ್ಣು: ನಗುತ ನೀ ಕರೆದರೆ
ಗಂಡು+ಹೆಣ್ಣು: ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ಹೆಣ್ಣು: ಬಾಳೆಲ್ಲ ಹಸಿರಾದಂತೆ
ಗಂಡು: ಬಾಳೆಲ್ಲ ಹಸಿರಾದಂತೆ