Mind Sharing?

ಚಿತ್ರ: ಮತ್ತೆ ಹಾಡಿತು ಕೋಗಿಲೆ (1990)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್

*********************************************************************************************************************************

ಬಾ ನನ್ನ ಸಂಗೀತ…
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಾಶಯ
ಸಂಗೀ………..ತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಎಂದೆಂದೂ ಬದುಕಲ್ಲಿ
ಸಂತೋಷವೇ ತುಂಬಲಿ
ಒಲವು ಹೂವಾಗಿ
ಗೆಲುವು ಕಂಪಾಗಿ
ಸುಖವೇ ತುಂಬಲಿ……
ಆಆಆಆ..
ಆಆಆ
ಆಆಆ
ಆಆಆ
ಮಾತಾಡೊ ಮಾತೆಲ್ಲ
ಒಂದೊಂದು ಮುತ್ತಾಗಲಿ
ಚೆಲುವೆ ಈ ನನ್ನ ಸನಿಹ
ನಿನಗೆಂದು ಹಿತವಾ ತೋರಲಿ
ನಗು ನಗುತ ನಾವು
ದಿನವೂ ಸೇರಿ
ನಲ್ಲೇ ಹೀಗೆ ನಲಿಯುವ
ಕನಸಲ್ಲಿ ತೇಲಾಡುವ
ಸವಿಗನಸಲ್ಲಿ ತೇಲಾಡುವ
ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಾಶಯ
ಸಂಗೀ……ತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಿಂಗಾರಿ ಬದುಕಲ್ಲಿ
ಶೃಂಗಾರವೇ ತುಂಬಲಿ
ನನ್ನ ಬಂಗಾರಿ
ನನ್ನ ವಯ್ಯಾರಿ
ದಿನವೂ ನಲಿಯಲಿ
ಹ್ಮ್..ಹ್ಮ್..ಹ್ಮ್ ಹ್ಮ್
ಆ ಆ ಆ ಆ
ನಿನ್ನಂಥ ಹೆಣ್ಣನ್ನು
ಇನ್ನೆಲ್ಲಿ ನಾ ಕಾಣಲಿ
ನಿನ್ನ ಸೌಂದರ್ಯ
ಎಂದು ಹೀಗೇನೆ
ನಯನ ಸೆಳೆಯಲಿ
ನಿನ್ನ ಕಂಡ ಮೇಲೆ
ನನ್ನ ನಲ್ಲೇ
ನೂರು ವರುಷ ಬದುಕುವ
ಹೊಸ ಆಸೆ ನನಗಾಗಿದೆ
ಈಗ ಹೊಸ ಆಸೆ ನನಗಾಗಿದೆ
ಬಾ ನನ್ನ ಸಂಗೀತ
ಬಾ ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಾಶಯ
ಸಂಗೀತ..
ಸಂಗೀತ……..
ಸಂಗೀ…………..ತ
Mind Sharing?