ಚಲನಚಿತ್ರ: ಕವಿರತ್ನ ಕಾಳಿದಾಸ(1983)
ಗಾಯಕರು: ಡಾ: ರಾಜಕುಮಾರ್
ಸಂಗೀತ: ಎಂ. ರಂಗರಾವ್
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಟರ್ರ್ರ್ರ್ರ್ರ್ರ್ಆಆಆಆಆ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಅಹ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಆಹಾ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಎಳೆ ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಹನಿ ಫಳ್ಗುಟೈತೆ
ಅವ್ ಎಳೆ ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಹನಿ ಫಳ್ಗುಟೈತೆ
ಹಕ್ಕಿ ಹಾರುತಿದೆ, ಕಿಚಿ ಪಿಚಿ ಎನ್ನುತಿದೆ
ಹಕ್ಕಿ ಹಾರುತಿದೆ, ಕಿಚಿ ಪಿಚಿ ಎನ್ನುತಿದೆ
ಮಂಗಾ ಮರ ಏರುತಿದೆ
ಆ ಕೊಂಬೆ ಈ ಕೊಂಬೆ ಎಗರುತಿದೆ
ಯಾಕ್ಲೆ ಹಣಮಂತಣ್ಣ ಗುರ್ಗುಡ್ತಿಯ?
ಮಂಗಾ ಮರ ಏರುತ್ತಿದೆ
ಆ ಕೊಂಬೆ ಈ ಕೊಂಬೆ ಎಗರುತಿದೆ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಅಹ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಆಕಾಶದಾಗೆ ಬಣ್ಣ ಬಳದವ್ನ್ ಯಾರು ?
ಈ ಬೆಟ್ಟ ಗುಡ್ಡಗಳ ಮಡುಗ್ದವ್ನ್ ಯಾರು ?
ಮರದ ಮ್ಯಾಗೆ ಹಣ್ಣ ಇಟ್ಟವ್ನ್ ಯಾರು ?
ಹಣ್ಣ ಒಳ್ಗೆ ರುಚಿಯ ತುಂಬದೌನ್ ಯಾರು ?
ಓಓಓಓಓಓಓಓಓಓ
ಆಹಾಹಾ ಆಆಆಅ
ಓ ಕಾಳ
ಓ ಕರಿಯ
ಓ ಮುನಿಯ, ಓ ಮರಿಯಾ, ಓ ಕೆಂಚ, ಓ ಜವ್ರ
ಇಂದು ಈ ಭೂಮಿ ಮ್ಯಾಗೆ
ನನ್ನ ನಿಮ್ಮ ತಂದವ್ರ್ ಯಾರೋ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಅಹ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಬೀರಪ್ಪನು ಕುಂತವನೇ ಗುಡಿಯ ಒಳ್ಗೆ
ಬೇಡಿದ ವರ್ದಾನ ಕೊಡುವ ನಮಗೆ
ಭಕುತರನು ಕಂಡಾರೆ ಆಸೆ ಅವಗೆ
ಕೆಟ್ಟೋರ ಕಂಡಾರೆ ರೋಸಾ ಅವಗೆ
ಓಓಓಓಓಓಓಓಓಓ
ಆಹಾಹಾ ಆಆಆಅ
ಓ ಬೀರ
ಓ ಮಾರ
ಓ ನಂಜ, ಓ ಕೆಂಪ
ಬರ್ರಲಾ ಹೋತಾಯ್ತು
ವಟ್ಟೆ ಚುರ್ ಗುಟ್ತೈತೆ
ರಾಗಿ ಮುದ್ಧೆ ಉಣ್ಣೋ ಹೊತ್ತು
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಅಹ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಬಾನಾಗೆ ರಂಗು ಚೆಲ್ಲಿ
ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಅಹ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಟರ್ರ್ರ್ರ್ರ್ರ್ರ್ಟರ್ರ್ರ್ರ್ರ್ರ್ರ್ ಬಾ ಬಾ ,
ಟರ್ರ್ರ್ರ್ರ್ರ್ರ್ಟರ್ರ್ರ್ರ್ರ್ರ್ರ್ ,
ಅಯ್ಯಾಆ ಸಂಧಿಗುಂಧಿ ವಳ್ಗೆಲ್ಲ ನುಗ್ತಾವಲಪ ಇವು
ಲೇ ಬರ್ರ ಲೇ
ಟರ್ರ್ರ್ರ್ರ್ರ್ರ್
ಬಾ ಬಾ ಬಾ
ಟರ್ರ್ರ್ರ್ರ್ರ್ರ್