Mind Sharing?

ಚಿತ್ರ: ಗುರು ಬ್ರಹ್ಮ(1992)
ಗಾಯಕರು: ಮನೊ, ಕೆ.ಎಸ್.ಚಿತ್ರ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ

**********************************************************************************************************************************

ಗಂಡು: ಗುಯ್ ಗುಯ್ ಗುಯ್ ಗುಯ್
ಹೆಣ್ಣು: ಗುಯ್ ಗುಯ್ ಗುಯ್ ಗುಯ್
ಗಂಡು+ಹೆಣ್ಣು: ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗಂಡು: ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಹೆಣ್ಣು: ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗಂಡು: ಗುಯ್ ಗುಯ್ ಗುಯ್ ಗುಯ್
ಹೆಣ್ಣು: ಗುಯ್ ಗುಯ್ ಗುಯ್ ಗುಯ್
ಗಂಡು: ಸುರಿದನು ಮಳೆರಾಯ
ಹರಿದನು ಹನಿರಾಯ
ಪ್ರಣಯಿಗಳ
ಪ್ರೇಮಿಗಳ
ಮನಸಾ ನೆನಸಿಲ್ಲ
ನಡುಕ ತರಿಸಿಲ್ಲ
ಹೆಣ್ಣು: ಗುಡುಗಿದೆ ಮುಗಿಲೊಳಗೆ
ಮಿಂಚಿದ ಹಗಲೊಳಗೆ
ಅಧರಗಳ
ಧಮನಿಗಳ
ಬಿಸಿಯ ಬಿಡಿಸಿಲ್ಲ
ದಾಹ ತಣಿಸಿಲ್ಲ
ಗಂಡು: ಹರೆಯ ತುಂಬಿ ಹರಿಯುವ
ಜೋಡಿ ಪ್ರೇಮ ನದಿಗಳ
ಏರಿ ಇಳಿವ ಅಲೆಗಳ
ಮೇಲೆ ಸುರಿದ ಹನಿಗಳ
ಹೆಣ್ಣು: ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಹೋ ಬಂದ ವರುಣಾ
ಮಳೆ ನಿಂತ್ ಹೋಯ್ತು
ಮೈ ಬಿಸಿಯಾಯ್ತು
ಧಗಧಗ ಉರಿಗೆ
ಸುಖ ಹಾರೋಯ್ತು
ಗಂಡು: ವರುಣಾ ವರುಣಾ
ವರುಣಾ ವರುಣಾ
ಉರಿಯೋ ಒಡಲ ಮೇಲೆ
ತೋರೋ ಕರುಣ
ತೋರೋ ಕರುಣ
ಹೆಣ್ಣು: ಗುಯ್ ಗುಯ್ ಗುಯ್ ಗುಯ್
ಗಂಡು: ಗುಯ್ ಗುಯ್ ಗುಯ್ ಗುಯ್
ಹೆಣ್ಣು: ಬಿರಿಯುವ ಬಿಸಿಲಿರಲಿ
ಕೊರೆಯುವ ಚಳಿ ಇರಲಿ
ಮಳೆಯಿರಲಿ
ಮಂಜಿರಲಿ
ಪ್ರೀತಿ ನಡೆವಾಗ
ಎಲ್ಲಾ ಜೊತೆಗಿರಲಿ
ಗಂಡು: ಕಾಮನ ಬಿಲ್ಲಿರಲಿ
ಹೂವಿನ ಶರವಿರಲಿ
ಹಸಿವಿರಲಿ
ರುಚಿಯಿರಲಿ
ಪ್ರೀತಿ ನಡೆವಾಗ
ಸುಖಿಸೊ ಮನಸಿರಲಿ
ಹೆಣ್ಣು: ಆಸೆ ತುಂಬಿ ತುಳುಕುವ
ನಲ್ಲ ನಲ್ಲೆ ಬೆರೆಯಲಿ
ಎಲ್ಲಾ ಸೊಲ್ಲ ಮರೆಯಲಿ
ಜೊಲ್ಲ ಬೆಲ್ಲ ಸವಿಯಲಿ
ಗಂಡು: ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಓ.. ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಹೆಣ್ಣು: ವರುಣಾ ವರುಣಾ
ವರುಣಾ ವರುಣಾ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣಾ
ಹೋ..ಬಂದ ವರುಣಾ
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
Mind Sharing?