Mind Sharing?

ಚಿತ್ರ: ರಾಯರು ಬಂದರು ಮಾವನ ಮನೆಗೆ (1993)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ
ಸಂಗೀತ: ರಾಜ್-ಕೋಟಿ
ಸಾಹಿತ್ಯ: ಎಂ. ಎನ್. ವ್ಯಾಸರಾವ್

**********************************************************************************************************************************

ಗಂಡು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಹೆಣ್ಣು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಗಂಡು: ಕನ್ನಡನಾಡೆ ಮಧುಚಂದ್ರ
ಕನ್ನಡನುಡಿಯೇ ಶ್ರೀಗಂಧ
ಹೆಣ್ಣು: ಕನ್ನಡನಾಡೆ ಮಧುಚಂದ್ರ
ಕನ್ನಡನುಡಿಯೇ ಶ್ರೀಗಂಧ
ಗಂಡು: ಉಸಿರು ನೀಡಿದೆ
ಹೆಣ್ಣು: ಹಸಿರು ತೂಗಿದೆ
ಗಂಡು: ಮಧುರವಾಗಿದೆ……..
ಗಂಡು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಹೆಣ್ಣು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಗಂಡು: ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು
ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು
ಹೆಣ್ಣು: ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು
ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು
ಗಂಡು: ಚಿಗುರೊಡೆಯಿತು ಬೆಳಕರಳಿತು ಹೊಳೆ ತರಿಸಿತು ರಸತಾಣ
ಹೆಣ್ಣು: ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ
ಗಂಡು: ಕನ್ನಡ ನೆಲವೇ ಧನ್ಯ
ಕನ್ನಡ ಜಲವೇ ಮಾನ್ಯ
ಹೆಣ್ಣು: ಕನ್ನಡ ನೆಲವೇ ಧನ್ಯ
ಕನ್ನಡ ಜಲವೇ ಮಾನ್ಯ
ಗಂಡು: ಉಸಿರು ನೀಡಿದೆ
ಹೆಣ್ಣು: ಹಸಿರು ತೂಗಿದೆ
ಗಂಡು: ಮಧುರವಾಗಿದೆ
ಗಂಡು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಹೆಣ್ಣು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಹೆಣ್ಣು: ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದೂ ಇಲ್ಲ
ಗಂಡು: ನಮ್ಮ ಧರ್ಮದಲ್ಲಿ ಬೇಧ-ಭಾವ ಕಾಣೋದಿಲ್ಲ
ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ
ಹೆಣ್ಣು: ಗಿಡಮರಗಳೆ ತರುಲತೆಗಳೆ ನದಿವನಗಳೆ ವರದಾನ
ಗಂಡು: ಜನ ಬೆರೆತರೆ ಸಮರಸದಲಿ ಅದೆ ಒಲವಿನ ಹೊಸ ಗಾನ
ಹೆಣ್ಣು: ಕನ್ನಡ ಜನರೇ ಚೆಂದ
ಕನ್ನಡ ಮನವೇ ಅಂದ
ಗಂಡು: ಕನ್ನಡ ಜನರೇ ಚೆಂದ
ಕನ್ನಡ ಮನವೇ ಅಂದ
ಹೆಣ್ಣು: ಉಸಿರು ನೀಡಿದೆ
ಗಂಡು: ಹಸಿರು ತೂಗಿದೆ
ಹೆಣ್ಣು: ಮಧುರವಾಗಿದೆ
ಗಂಡು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಹೆಣ್ಣು: ಅಡವಿದೇವಿಯ ಕಾಡುಜನಗಳ ಈ ಹಾಡು
ನಾಡಿನ ಜೀವ ತುಂಬಿದೆ
ಗಂಡು: ಕನ್ನಡನಾಡೆ ಮಧುಚಂದ್ರ
ಕನ್ನಡನುಡಿಯೇ ಶ್ರೀಗಂಧ
ಹೆಣ್ಣು: ಕನ್ನಡನಾಡೆ ಮಧುಚಂದ್ರ
ಕನ್ನಡನುಡಿಯೇ ಶ್ರೀಗಂಧ
ಗಂಡು: ಉಸಿರು ನೀಡಿದೆ
ಹೆಣ್ಣು: ಹಸಿರು ತೂಗಿದೆ
ಗಂಡು: ಮಧುರವಾಗಿದೆ

Mind Sharing?