ಚಿತ್ರ: ಸ್ವಾಭಿಮಾನ (1985)
ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಶಂಕರ್-ಗಣೇಶ್
*********************************************************************************************************************************
ಗಂಡು: ಒಂದು ಎರಡು ಮೂರು ಇನ್ನು ಬೇಕೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಒಂದು ಎರಡು ಮೂರು ಇನ್ನು ಬೇಕೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಒಂದೊಂದರಲ್ಲೂ ಎಷ್ಟೊಂದು ಜೇನು
ಹೆಣ್ಣು: ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು: ಒಂದಾದೆ ಇಂದು ಈ ನನ್ನಲ್ಲಿ ನೀನು
ಒಂದು ಎರಡು ಮೂರು ಇನ್ನು ಬೇಕೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಈ ಚೆಲುವಿಗೆ ತಿಂಗಳೇ ನಾಚಿದೆ
ಆ ಶಿಲ್ಪಿಯ ಕಲ್ಪನೆ ಮೀರಿದೆ
ಹೆಣ್ಣು: ನೀ ಜೊತೆಯಿರೆ ಮನಸಿದು ಹಾಡಿದೆ
ನನ್ನೆದೆಯಲಿ ತಾಳವು ಹಾಕಿದೆ
ಗಂಡು: ಹೂತೇರಲಿ ಬಂದ ವನದೇವಿಯೋ
ಧರೆ ನೋಡಲು ಬಂದ ರತಿದೇವಿಯೋ
ಹೆಣ್ಣು: ಸಂತೋಷವೆ ಸಂಕೋಚವೆ ನಾ ಮೂಕಳಾದೆ
ಗಂಡು: ಒಂದು ಎರಡು ಮೂರು ಇನ್ನು ಬೇಕೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಹೊಯ್…..ಒಂದೊಂದರಲ್ಲೂ ಎಷ್ಟೊಂದು ಜೇನು
ಹೆಣ್ಣು: ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು: ಒಂದಾದೆ ಇಂದು ಈ ನನ್ನಲ್ಲಿ ನೀನು
ಒಂದು ಎರಡು ಮೂರು ಇನ್ನು ಬೇಕೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಹೆಣ್ಣು: ಈ ಕಂಗಳು ಬಯಕೆಯ ಕನ್ನಡಿ
ನೀ ಬರೆದಿಹೆ ಪ್ರಣಯಕೇ ಮುನ್ನುಡಿ
ಗಂಡು: ನೀ ನಕ್ಕರೆ ಮುತ್ತದು ಸುರಿಯಿತು
ನೀ ನುಡಿದರೆ ಸರಿಗಮ ಮೀಟಿತು
ಹೆಣ್ಣು: ಕೈ ಸೋಕಲು ಮೈ ಮಿಂಚಾಯಿತು
ನೂರಾಸೆಯು ಅರಳಿ ಹೂವಾಯಿತು
ಗಂಡು: ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕು
ಒಂದು ಎರಡು ಮೂರು ಇನ್ನು ಆಹಾ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಹೇ……ಒಂದೊಂದರಲ್ಲೂ ಎಷ್ಟೊಂದು ಜೇನು
ಹೆಣ್ಣು: ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು: ಒಂದಾದೆ ಇಂದು ಈ ನನ್ನಲ್ಲಿ ನೀನು
ಒಂದು ಎರಡು ಮೂರು ಇನ್ನು ಬೇಕೇ..ಹೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಆಹಾ…..ಒಂದು ಎರಡು ಮೂರು ಇನ್ನು ಬೇ..ಕೇ
ಹೆಣ್ಣು: ನೀನು ಕೊಟ್ಟ ಮೇಲೆ ಲೆಕ್ಕ ಏಕೆ
ಗಂಡು: ಆ….ಅಹಹಹ