Mind Sharing?

ಚಲನಚಿತ್ರ: ಚಲಿಸುವ ಮೋಡಗಳು (1982)
ಗಾಯಕರು: ಡಾ. ರಾಜಕುಮಾರ್ , ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

**********************************************************************************************************************************

ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ವಾಣಿಯ ವೀಣೆಯ ಸ್ವರ ಮಾಧುರ್ಯವೋ
ಸುಮಧುರ ಸುಂದರ ನುಡಿಯೋ ..ಆಹಾ
ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
(ದ ಪ ದ… ರಿ ಸ ರಿ…)
(ಗ ಪ ಪ ದ ಸ ರಿ ದ ಸ )
ಸವಿ ನುಡಿ ತಣ್ಣನೆ ಗಾಳಿಯ ಹಾಗೆಏಏಏಏಏ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೋ ಓಓಓಓಓ
ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಆಹಾಹಾಹಾಆಆಆಆ
ಅಹಹಹ
ಅಹಹಹ
ಆಹಾಹ ಅಹಹಹ
ಕುಮಾರವ್ಯಾಸನ ಕಾವ್ಯದ ಚಂದ
ಕವಿಸರ್ವಜ್ಞನ ಪದಗಳ ಅಂದ
ಕುಮಾರವ್ಯಾಸನ ಕಾವ್ಯದ ಚಂದ
ಕವಿಸರ್ವಜ್ಞನ ಪದಗಳ ಅಂದ
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೋ ..ಆಹಾ
ಜೇನಿನ ಹೊಳೆಯೋ (ಹೆಣ್ಣು) ಹಾಲಿನ ಮಳೆಯೋ
ಸುಧೆಯೋ (ಹೆಣ್ಣು) ಕನ್ನಡ ಸವಿ ನುಡಿಯೋ
(ಗಂಡು)ಅಹ…(ಗಂಡು/ಹೆಣ್ಣು) ವಾಣಿಯ ವೀಣೆಯ ಸ್ವರ ಮಾಧುರ್ಯವೋ
ಸುಮಧುರ ಸುಂದರ ನುಡಿಯೋ ..ಆಹಾ
ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಸುಧೆಯೋ ಕನ್ನಡ ಸವಿ ನುಡಿಯೋಓಓಓಓಓಓಓ
Mind Sharing?