ಚಿತ್ರ: ರಥಸಪ್ತಮಿ (1986)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್.ಜಾನಕಿ
ಸಂಗೀತ: ಉಪೇಂದ್ರಕುಮಾರ್
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಗಂಡು: ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ
ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ
ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ……ಉ
ಹೆಣ್ಣು: ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ
ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ…..ಉ
ಗಂಡು: ಆ ಬಾನ ನೆರಳಲ್ಲಿ
ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ
ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ
ಮಾತೊಂದ ನುಡಿವ
ಹೆಣ್ಣು: ಈ ಸಂಜೆ ರಂಗಲ್ಲಿ
ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ
ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ
ಮತೊಂದ ನುಡಿವ
ಗಂಡು: ನೀನೆ ನನ್ನ ಪ್ರಾಣ
ಹೆಣ್ಣು: ನಮ್ಮ ಪ್ರಣಯ ಮಧುರ ಗಾನ
ಗಂಡು: ನೀನೆ ನನ್ನ ಪ್ರಾಣ
ಹೆಣ್ಣು: ನಮ್ಮ ಪ್ರಣಯ ಮಧುರ ಗಾನ
ಗಂಡು+ಹೆಣ್ಣು: ನಿನ್ನ ಬಿಡಲಾರೆ ನಾನೆಂದಿಗೂ……ಉ
ಹೆಣ್ಣು: ಜೊತೆಯಾಗಿ
ಗಂಡು: ಹಿತವಾಗಿ
ಹೆಣ್ಣು: ಸೇರಿ ನಡೆವ
ಗಂಡು: ಸೇರಿ ನುಡಿವ
ಹೆಣ್ಣು: ಕನಸಲ್ಲಿ ಕಂಡಾಸೆ
ಮನಸಲ್ಲೆ ಇರುವಾಸೆ
ಎಲ್ಲವು ಒಂದೇನೆ
ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ
ನನ್ನಾಣೆ ನಲ್ಲ
ಗಂಡು: ಹಗಲಲ್ಲಿ ಕಂಡಾಸೆ
ಇರುಳಲ್ಲಿ ಬಂದಾಸೆ
ಎಲ್ಲವು ಒಂದೇನೆ
ನಿನ್ನೊಡನೆ ಇರುವಾಸೆ
ಬೇರೇನೂ ನಾ ಕೇಳೆ
ನನ್ನಾಣೆ ನಲ್ಲೆ
ಹೆಣ್ಣು: ಎಂದು ಹೀಗೆ ಇರುವ
ಗಂಡು: ನಾವು ಎಂದು ಹೀಗೆ ನಲಿವ
ಹೆಣ್ಣು: ಎಂದು ಹೀಗೆ ಇರುವ
ಗಂಡು: ನಾವು ಎಂದು ಹೀಗೆ ನಲಿವ
ಗಂಡು+ ಹೆಣ್ಣು: ನಿನ್ನ ಬಿಡಲಾರೆ ನಾ ಎಂದಿಗೂ
ಲಲ್ಲ ಲಾ…..ಲ
ಲಲ್ಲ ಲಾ…..ಲ
ಗಂಡು: ಸೇರಿ ನಡೆವ
ಹೆಣ್ಣು: ಸೇರಿ ನುಡಿವ
ಗಂಡು: ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ಹೆಣ್ಣು: ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ಗಂಡು+ಹೆಣ್ಣು: ನಿನ್ನ ಬಿಡಲಾರೆ ನಾ ಏಂದಿಗೂ….ಉ