Mind Sharing?

ಚಲನಚಿತ್ರ: ಆಟೋರಾಜ (1982)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

*************************************************************************************************************************
ನಲಿವ ಗುಲಾಬಿ ಹೂವೆ
ಮುಗಿಲ ಮೇಲೇರಿ ನಗುವೇ
ನಲಿವ ಗುಲಾಬಿ ಹೂವೆ
ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ
ಅರಿಯೇ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ
ಒಲವೋ ಛಲವೋ
ಸುಳಿದೆ ತಂಗಾಳಿಯಂತೆ
ನುಡಿದೆ ಸಂಗೀತದಂತೆ
ಸುಳಿದೆ ತಂಗಾಳಿಯಂತೆ
ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತಾ ಕುಣಿದೆ
ಸೊಗಸಾಗಿ ಹಿತವಾಗಿ
ಮನವಾ ನೀ ಸೇರಲೆಂದೇ
ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಹೀಗೇಕೆ ಮರೆಯಾದೆ
ನಲಿವ ಗುಲಾಬಿ ಹೂವೆ
ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ
ಒಲವೋ (ನಗುವುದು) ಛಲವೋ
ಸುಮವೇ ನೀ ಬಾಡದಂತೆ
ಬಿಸಿಲ ನೀ ನೋಡದಂತೆ
ಸುಮವೇ ನೀ ಬಾಡದಂತೆ
ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ
ಇರಲಿ ನನಗೆಲ್ಲಾ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ನಿನಗಾಗಿ ನನಗಾಗಿ
ನಲಿವಾ ಗುಲಾಬಿ ಹೂವೆ
ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ
ಅರಿಯೆಏಏಏಏಏಏಏ ನನ್ನಲ್ಲಿ ಛಲವೋಓಓಓಓಓಓ
ನಲಿವ ಗುಲಾಬಿ ಹೂವೆಏಏಏಏಏ
Mind Sharing?