Mind Sharing?

ಚಿತ್ರ : ಮುಗುಳುನಗೆ (2017)
ಗಾಯನ : ಶ್ರೇಯ ಘೋಷಾಲ್
ಸಂಗೀತ : ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್

*********************************************************************************************************************************

ನಿನ್ನ ಸ್ನೇಹದಿಂದ
ಎಲ್ಲ ಚಂದ ಚಂದ
ನಿಂಗೆ ಧನ್ಯವಾದ
ತುಂಬು ಹೃದಯದಿಂದ
ಮನದಲೊಂದು
ಮಧುರ ಮೈತ್ರಿ
ಜೀವ ಪಡೆಯುತಿದೆ
ಪ್ರತಿಬಿಂಬವೂ
ಪ್ರೇಮದ
ಹೂವು ಮುಡಿಯುತಿದೆ
ನಿನ್ನ ಸ್ನೇಹದಿಂದ
ಎಲ್ಲ ಚಂದ ಚಂದ
ಹ್ಮ್….ನಿಂಗೆ ಧನ್ಯವಾದ
ತುಂಬು ಹೃದಯದಿಂದ
ತುಂಬಾ ಸನಿಹದಲ್ಲಿ
ತುಂಟ ದನಿಯಲ್ಲಿ
ಹುಸಿ ಕೋಪವ ಕಲಿಸು
ತುಸು ನಾಚಿಕೆ ಬಿಡಿಸು
ಕುಂತ ಜಾಗದಲ್ಲಿ
ಕುಂಟು ನೆಪ ಹೇಳಿ
ಕಿರುಬೆರಳ ನೇವರಿಸು
ಒಂದಿನಿತು ಆ…….ವರಿಸು
ಸರಳವಾದ ಸರಸವನ್ನು ಆಧರ ಬಯಸುತಿದೆ
ನಿನ್ನಿಂದಲೇ
ರಸಿಕತೆ
ಉದಯವಾಗುತಿದೆ
ನಿನ್ನ ಸ್ನೇಹದಿಂದ
ಎಲ್ಲ ಚಂದ ಚಂದ
ಹ್ಮ್…ಒಂ….ದೇ ಕಣ್ಣಿನಿಂದ
ನಿಂಗೆ ಧನ್ಯವಾದ
ಆ..ಆ.ಆ..ಆ.ಆಆ…
ಸಖಿ ಏರಿ ಆಲಿ ಪಿಯ ಬಿನ
ಸಖಿ ಏರಿ ಆಲಿ ಪಿಯ ಬಿನ
ಸಖಿ ಕಲನ ಪರತಃ ಮೋಹೇ
ಘರೇ ಪಲತ ಚೀನ ದೀನ
ಏರಿ ಆಲಿ ಪಿಯ ಬಿನ
ನೀನೆ ಹೇಳು
ನೀನೆ ಹೇಳು..
ಸತಾಯಿಸುವ
ಆಸೆಗಳನ್ನು
ಹೇಗೆ ಹೇಳಲಿ ನಾ
ಅಂದಗಾರ
ನಿನ್ನ ನೋಡಿ
ನಿಧಾನಿಸಲು ಸಾಧ್ಯವಿಲ್ಲಾ ಏನು ಮಾಡಲಿ ನಾ
ನೀ ನೆನೆಯುವ
ಮಳೆಯಲಿ
ನನಗು ಪಾಲು ಇದೆ
ನಿನ್ನ ಪ್ರೀತಿಯ
ಶೀತವು
ಪ್ರಾಣ ಉಳಿಸುತಿದೆ
ನಿನ್ನ ಸ್ನೇಹದಿಂದ
ಎಲ್ಲ ಚಂದ ಚಂದ
ಓ……ಒಳ್ಳೆ ರೀತಿಯಿಂದ
ನಿಂಗೆ ಧನ್ಯವಾದ
Mind Sharing?