ಚಿತ್ರ: ಗಾಯತ್ರಿ ಮದುವೆ (1983)
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್
*********************************************************************************************************************************
ಹೆಣ್ಣು: ನಿನ ಜಾತಕ ನನ ಕೈಲಿದೆ
ನಿನ ನಾಟಕ ಗೊತ್ತಾಗಿದೆ
ಈಗೇನು ಮಾಡುವೇ
ಇನ್ನೇನು ಆಡುವೆ
ಗಂಡು: ಚಿನ್ನ ನಿನ್ನ ಕೋಪದ
ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ .. ಹ್ಹಾಂ …
ಹೆಣ್ಣು : ನಿನ್ನ ಜಾತಕ ನನ ಕೈಲಿದೆ
ನಿನ ನಾಟಕ ಗೊತ್ತಾಗಿದೆ
ಹೆಣ್ಣು: ನಿನ್ನ ಮುದ್ದು ಮಾತಿಗಿನ್ನು ಎಂದು ಸೋಲೆನು
ನಿನ್ನ ಪ್ರೇಮ ಜಾಲದಲ್ಲಿ ಜಾರಿ ಬೀಳೇನು
ಚೆಲ್ಲಾಟಕೆ
ಬೆರಗಾಗೆನು
ನನಗಿನ್ನು ನೀ ಹೆದರಬೇಕು
ಗಂಡು: ನನ್ನ ಮೇಲೆ ಹೀಗೇಕೊ ರೋಷ ಕಾಣೆನು
ನಿನ್ನ ಪ್ರೀತಿ ಏನಾಯ್ತು ಅವನೇ ಬಲ್ಲನು
ಓ ಸುಂದರೀ.. ಶರಣಾದೇನು
ಆ ಓಲೆ ಹರಿದು ಹಾಕು
ಹೆಣ್ಣು: ಆಡುವುದೇ ಒಂದು ಮಾಡುವುದೇ ಒಂದು
ನಿನ್ನ ನಾ ನಂಬೆನೂ
ಗಂಡು: ಹೇಯ್.. ನಿನ್ನ ಜಾತಕ ನೋಡಿಲ್ಲಿದೆ
ನಿನ್ನ ಆಟಕೆ ಬ್ರೇಕ್ ಹಾಕಿದೆ
ಈಗೇನು ಮಾಡುವೇ ಹ್ಹಹ್ಹಾಹ್ಹ..
ಇನ್ನೆಲ್ಲಿ ಓಡುವೇ
ಹೆಣ್ಣು: ಎಂಥ ಒಳ್ಳೆ ಕಾಗದ
ನಿನ್ನ ಪ್ರೀತಿ ಪ್ರೇಮದ
ಕಥೆಗಳೆ ಇಲ್ಲಿವೆ
ಗಂಡು: ಅರೆರೆರೆರೆ .. ನಿನ್ನ ಜಾತಕ ನೋಡಿಲ್ಲಿದೆ…..ಹೇ
ನಿನ್ನ ಆಟಕೆ ಬ್ರೇಕ್ ಹಾಕಿದೆ.. …
ಗಂಡು: ನನ್ನ ಕೈಲಿ ಹುಡುಗಾಟ ಆಡೋ ಆಸೆಯೆ..
ನನ್ನ ಮೇಲೆ ದೂರನ್ನು ಹೇಳೋ ಚಪಲವೆ
ಈ ಬುದ್ಧಿಯೂ … ಸರಿಯಲ್ಲವೆ..
ಕಲಹ ನಮಗಲ್ಲ ಚೆಲುವೆ…
ಹೆಣ್ಣು: ಬಿಡಲಾರೆ ನಿನ್ನನ್ನು ಎಲ್ಲೇ ಹೋದರು
ಕೊಡಲಾರೆ ಈ ಓಲೆ ಏನೇ ಆದರು
ನಿಮ್ಮೂರನು……ಇದು ಸೇರಲಿ
ನಿಮ್ಮೋರು ಓಡೋಡಿ ಬರಲಿ
ಗಂಡು: ತಂಟೆಗೆ ನಾ ಬರೆನು
ಕಣ್ಣಿಗೆ ಕಾಣಿಸೆನು
ನಿನ್ನಂತೆ ನಡೆವೇನೂ…..
ಹೆಣ್ಣು: ನಿನ ಜಾತಕ ನನ ಕೈಲಿದೆ (ಗಂಡು: ಹ್ಹಾಂ )
ನಿನ ನಾಟಕ ಗೊತ್ತಾಗಿದೆ (ಗಂಡು: ಹ್ಹಾಂ )
ಈಗೇನು ಮಾಡುವೆ
ಇನ್ನೇನು ಹಾಡುವೆ
ಗಂಡು: ಚಿನ್ನ ನಿನ್ನ ಕೋಪದ
ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ .. ಹ್ಹಾಂ …
ಹೆಣ್ಣು: ನಿನ ಜಾತಕ ನನ ಕೈಲಿದೆ (ಗಂಡು: ಹ್ಹಾಂ)
ನಿನ ನಾಟಕ ಗೊತ್ತಾಗಿದೆ (ಗಂಡು: ಹ್ಹಾಂ )