ಚಿತ್ರ: ಬೇಡಿ ಬಂದವಳು (1968)
ಗಾಯಕರು: ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಆರ್.ಸುದರ್ಶನಂ
*********************************************************************************************************************************
ಹೆಣ್ಣು: ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನಸೆಳೆದ ನಲ್ಲ
ಕೊಟ್ಟನಲ್ಲ
ಮನಸೆಳೆದ ನಲ್ಲ
ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ಗಂಡು: ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನಸೆಳೆದ ನಲ್ಲ
ಕೊಟ್ಟನಲ್ಲಆಆಆ
ಮನಸೆಳೆದ ನಲ್ಲ
ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ಗಂಡು+ಹೆಣ್ಣು: ನೀರಿನಲ್ಲಿ ಅಲೆಯ ಉಂಗುರ
ಗಂಡು: ಅಂದಿಗೆಯು ಕಾಲಿನುಂಗುರ
ಅದರ ದನಿ ಎಷ್ಟು ಸುಂದರ
ಅಂದಿಗೆಯು ಕಾಲಿನುಂಗುರ
ಅದರ ದನಿ ಎಷ್ಟು ಸುಂದರ
ಹೆಣ್ಣು: ತರುವು ಲತೆಯು ಸೇರಿದ ಕಥೆಯು
ತರುವು ಲತೆಯು ಸೇರಿದ ಕಥೆಯು
ತನವ ಬಳಸಿ ತೊಳಿನುಂಗುರ..ಆ ಆ ಆ
ಗಂಡು: ನೀರಿನಲ್ಲಿ ಅಲೆಯ ಉಂಗುರ..ಆ ಆ ಆ
ಹೆಣ್ಣು: ನೀರಿನಲ್ಲಿ ಅಲೆಯ ಉಂಗುರ..ಆ ಆ ಆ
ಹೆಣ್ಣು: ಮಣ್ಣಿನಲ್ಲಿ ಕಂಡ ಉಂಗುರ
ಗಂಡು: ಹೆಣ್ಣು ನಾಚಿ ಗೀರಿದುಂಗುರ
ಹೆಣ್ಣು: ಮಣ್ಣಿನಲ್ಲಿ ಕಂಡ ಉಂಗುರ
ಗಂಡು: ಹೆಣ್ಣು ನಾಚಿ ಗೀರಿದುಂಗುರ
ಹೆಣ್ಣು: ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಗಂಡು: ಕಣ್ಣ ಸೆಳೆವ ಕುರುಳುದುಂಗುರ
ಹೆಣ್ಣು: ನೀರಿನಲ್ಲಿ ಅಲೆಯ ಉಂಗುರ
ಗಂಡು: ನೀರಿನಲ್ಲಿ ಅಲೆಯ ಉಂಗುರ
ಹೆಣ್ಣು: ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯ ಒಂದು ಡಂಗುರ
ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯ ಒಂದು ಡಂಗುರ
ಗಂಡು: ನಾನು ನುಡಿಯೇ ಕಿವಿಯಲಿಂಚರ
ನಾನು ನುಡಿಯೇ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ
ಗಂಡು+ಹೆಣ್ಣು: ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನಸೆಳೆದ ನಲ್ಲ
ಕೊಟ್ಟನಲ್ಲ
ಮನಸೆಳೆದ ನಲ್ಲ
ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ..ಆ ಆ ಆ
ನೀರಿನಲ್ಲಿ ಅಲೆಯ ಉಂಗುರ
ನೀರಿನಲ್ಲಿ ಅಲೆಯ ಉಂಗುರ
ಹ್ಮ್ ಹ್ಮ್ ಹ್ಮ್ ಹ್ಮ್…ಹ್ಮ್ ಹ್ಮ್ ಹ್ಮ್