Mind Sharing?

ಚಿತ್ರ: ಸಂಯುಕ್ತ (1988)
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ, ವಾಣಿ ಜಯರಾಮ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್

**********************************************************************************************************************************

ಗಂಡು: ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರೂ ನೀ ಹೇಳಿಕೊ
ನೀನೇ ನನ್ನಾ ಪ್ರಾಣವೂ… ಉ ಉ ಉ
ಹೆಣ್ಣು: ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರೂ ನೀ ಹೇಳಿಕೊ
ನೀನೇ ನನ್ನಾ ಪ್ರಾಣವೂ….. ಉ ಉ ಉ
ಗಂಡು: ಪ್ರೀತಿಯೊ ಪ್ರೇಮವೊ ಮೋಹವೊ
ಹೆಣ್ಣು: ನಮ್ಮಲಿ ಮೂಡಿದ ಸ್ನೇಹವೊ
ಗಂಡು: ಬಾನಿಂದಲಿ ಈ ಭೂಮಿಗೆ
ತಾನಾಗಿ ಜಾರಿ ಬಂದ ಹೂವೇ
ನಿನ್ನoದಕೆ ವೈಯ್ಯಾರಕೆ
ಸಾಟಿ ಇಲ್ಲ ಬೇರೆ ಯಾರೂ ನನ್ನ ಒಲವೇ
ಹೆಣ್ಣು: ಕೆಂದಾವರೆ ಸಂತೋಷವು
ಆ ಸೂರ್ಯ ಮೂಡಿದಾಗ ತಾನೇ
ಈ ಹೆಣ್ಣಿನ ಆನoದವು
ನಲ್ಲ ನಿನ್ನ ಪ್ರೇಮ ಸವಿದ ಮೇಲೆ ತಾನೇ
ಗಂಡು: ಬಾಳಲಿ ನಿನ್ನ ನೋಡಿದೆ
ಬಾಳಲಿ ನಿನ್ನ ನೋಡಿದೆ
ಹೇಗೋ ನಿನ್ನ ಸೇರಿದೆ… ಏ ಏ ಏ
ಹೆಣ್ಣು: ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಗಂಡು: ಏನಾದರೂ ನೀ ಹೇಳಿಕೊ
ನೀನೇ ನನ್ನಾ ಪ್ರಾಣವೂ….. ಉ ಉ ಉ
ಹೆಣ್ಣು: ಪ್ರೀತಿಯೊ ಪ್ರೇಮವೊ ಮೋಹವೊ
ಗಂಡು: ನಮ್ಮಲಿ ಮೂಡಿದ ಸ್ನೇಹವೊ
ಗಂಡು: ಆಆ…..ಆಆಆ….. ಆಆ
ಹೆಣ್ಣು: ಓಓ……. ಓಓಓ… ಓಓ
ಹೆಣ್ಣು: ಸಂಗೀತವೂ ಸಾಹಿತ್ಯವೂ
ಒಂದಾಗಿ ಸೇರಿದಾಗ ತಾನೇ
ಆ ಗೀತೆಯ ಸೌoದರ್ಯಕೆ
ಮಾರು ಹೋಗಿ ಹೊನ್ನ ಕಲಶ ಇಟ್ಟ ಹಾಗೆ
ಗಂಡು: ನಾ ಕೂಗಿದೆ ಕೈ ನೀಡಿದೆ
ಸಂಗಾತಿಯಾಗಿ ಬಾರೆ ಎಂದೇ
ಆ ಮಾತಿಗೆ ನೀ ಸೋಲುತ
ದಾರಿ ದೀಪವಾಗಿ ನನ್ನ ಬಳಿಗೆ ಬಂದೆ
ಹೆಣ್ಣು: ಮಾತಲೇ ಮೋಡಿ ಹಾಕುವೆ
ಮಾತಲೇ ಮೋ..ಡಿ ಹಾಕುವೆ
ನೋಟದಲ್ಲೇ ಕೊಲ್ಲುವೆ
ಗಂಡು: ಪ್ರೀತಿಯೊ ಪ್ರೇಮವೊ ಮೋಹವೊ
ಹೆಣ್ಣು: ನಮ್ಮಲಿ ಮೂಡಿದ ಸ್ನೇಹವೊ
ಗಂಡು: ಏನಾದರೂ ನೀ ಹೇಳಿಕೊ
ಹೆಣ್ಣು: ನೀನೇ ನನ್ನಾ ಪ್ರಾಣವೂ….. ಉ ಉ ಉ
ಗಂಡು+ಹೆಣ್ಣು: ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
Mind Sharing?