Mind Sharing?

ಚಲನಚಿತ್ರ: ವಸಂತ ಗೀತ (1980)
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ

**********************************************************************************************************************************

ಹೆಣ್ಣು: ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯ್ತು
ಗಂಡು: ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯ್ತು
ಹೆಣ್ಣು: ಹಾಯಾದ
ಗಂಡು: ಈ ಸಂಜೆ
ಹೆಣ್ಣು: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ಗಂಡು: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಹೆಣ್ಣು: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ಗಂಡು: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಹೆಣ್ಣು: ಎಂಥ ಮುದ್ದಾಗಿದೇ
ಗಂಡು: ಏನು ಸೊಗಸಾಗಿದೇ
ಹೆಣ್ಣು: ಎಂಥ ಮುದ್ದಾಗಿದೇ
ಗಂಡು: ಏನು ಸೊಗಸಾಗಿದೇ
ಹೆಣ್ಣು: ಮಗುವಿನ ಹರುಷಕೆ ಇನಿಯನ ಸರಸಕೆ
ಗಂಡು: ಮನಸಿನ ಕುಣಿತಕೆ ಹೃದಯದ ಮಿಡಿತಕೆ
ಜುಮ್ಮ್ ಎಂದಿತು
ಹೆಣ್ಣು: ಅಹಾ..ಅಹಾ..ಅಹಾ..
ಗಂಡು: ಹಾಯಾದ ಈ ಸಂಜೆ
ಹೆಣ್ಣು: ಆನಂದ ತುಂಬಿರಲು
ಗಂಡು: ಬಾಳೆ ಸಂಗೀತ ಸುಧೆಯಾಯ್ತು
ಹೆಣ್ಣು: ಹಾಯಾದ
ಗಂಡು: ಈ ಸಂಜೆ
ಹೆಣ್ಣು: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಗಂಡು: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಹೆಣ್ಣು: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಗಂಡು: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಹೆಣ್ಣು: ಏನು ಸಂತೋಷವೂ
ಗಂಡು: ಏನು ಉಲ್ಲಾಸವು
ಹೆಣ್ಣು: ಏನು ಸಂತೋಷವೂ(ಮಗುವಿನ ದನಿಯಲ್ಲಿ)
ಗಂಡು: ಓಹೋ ಹಾ
ಹೆಣ್ಣು: ಏನು ಉಲ್ಲಾಸವು (ಮಗುವಿನ ದನಿಯಲ್ಲಿ)
ಗಂಡು: ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ
ಹೆಣ್ಣು: ಈ ಅನುಬಂಧವು ಹೀಗೆಯೆ ಸಾಗಲಿ…ಎಂಬಾಸೆಯು
ಗಂಡು: ಅಹಾ….ಅಹಾ….ಅಹಾ…
ಹೆಣ್ಣು/ಗಂಡು: ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯ್ತು
ಹಾಯಾದ ಈ ಸಂಜೆ
ಲಾ..ಲಲ…ಲಾಲಲ
ಲಾ..ಲಲ…ಲಾಲಲ
ಹಾಹಾ..ಹಹ.ಹಹಹ
Mind Sharing?