ಚಲನಚಿತ್ರ: ಅವನೇ ಶ್ರೀಮನ್ನಾರಾಯಣ(2019)
ರಚನೆ: ನಾಗಾರ್ಜುನ್ ಶರ್ಮ
ಸಂಗೀತ: ಬಿ. ಅಜನೀಶ್ ಲೋಕನಾಥ್
ಗಾಯನ: ವಿಜಯಪ್ರಕಾಶ್, ಶಶಾಂಕ್, ಪಂಚಮ್ ಜೀವ, ಚೇತನ್ ನಾಯಕ್
**********************************************************************************************************************************
ಕೇಳಿ ಕಾದಿರುವ ಬಾಂಧವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ
ನಾಕು ದಿಕ್ಕಿನಲೂ ಬೇಕವನು
ಬಂದೂಕು ಹಿಡಿದ ಮಾನವನು
ತಲೆಮೇಲಿದೆ ಕಿರೀಟ, ತೀರಾ ಹಠ
ಗುರಿ ಬೆನ್ನತ್ತೊ ನೇತಾರನು
(ಕೋರಸ್ ಸಮೇತ)
ಗಾಳಿಮಾತಿನ ಬಜಾ಼ರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನಹೆಸರು
(ಕೋರಸ್) ಹ್ಯಾಂಡ್ಸ್ ಅಪ್
ಅದು ಅನವರತ
(ಕೋರಸ್) ಹ್ಯಾಂಡ್ಸ್ ಅಪ್
ನಾ ಅಜ್ಞಾತ
(ಕೋರಸ್) ಹ್ಯಾಂಡ್ಸ್ ಅಪ್
ಇದೆ ವೇದಾಂತಆಆಆಆಆಆ
ಇದು ಚರಿತ್ರೆ ಸೃಷ್ಠಿಸೊ ಅವತಾರ
ರಂಗೇರಿದೆ ಮಾಯಜಾಲ
ಅನುಭವಿಸು ಓ ಪ್ರೇಕ್ಷಕನೇ
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ
ನನ್ನ ಗೆಲ್ಬೋದು ಅನ್ನುತ ನಿಂದನು ಓರ್ವ ರಾಕ್ಷಸ
ತಪ್ಪಲ್ಲ ಆದರೆ ಅದುವೆ ಊಹೆಗು ಮೀರಿದ ಸಾಹಸ
(ಕೋರಸ್) ಅನಿಸುತ್ತೆ, ಬಂದ ಹಾದಿಗೆ ರಚಿಸಲು ಹೊಸದೇ ಶಾಸನ
ಮೆರೆಯಲಿ ಗಗನದಲಿ ನಿಮ್ಮದೆ ಲಾಂಛನ
ಯುದ್ಧ ಮಾಡಬೇಕು ಓದಬಾರದು
ಕಟುಕರ ಮುಂದೆ ಭಗವದ್ಗೀತೆ
ಇದು ಚರಿತ್ರೆ ಸೃಷ್ಠಿಸೊ ಅವತಾರ
ಕೇಳಿ ನೆರೆದಿರುವ ಬಾಂಧವರೆ
ಭುವಿಯಲ್ಲಿ ಇವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ
(ಕೋರಸ್) ನಾಕು ದಿಕ್ಕಿನಲೂ ಬೇಕಿವನು
ಬಂದೂಕು ಹಿಡಿದ ಮಾನವನು
ತಲೆಮೇಲಿದೆ ಕಿರೀಟ, ತೀರಾ ಹಠ
ಗುರಿ ಬೆನ್ನತ್ತೊ ನೇತಾರನು
ಗಾಳಿಮಾತಿನ ಬಜಾ಼ರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನಹೆಸರು
ಹ್ಯಾಂಡ್ಸ್ ಅಪ್
(ಕೋರಸ್) ಇದು ಅನವರತ
ಹ್ಯಾಂಡ್ಸ್ ಅಪ್
(ಕೋರಸ್) ನೀ ಅಜ್ಞಾತ
ಹ್ಯಾಂಡ್ಸ್ ಅಪ್
(ಕೋರಸ್) ಇದೆ ವೇದಾಂತಆಆಆಆಆ
ಇದು ಚರಿತ್ರೆ ಸೃಷ್ಠಿಸೊ ಅವತಾರ