Mind Sharing?

ಚಿತ್ರ: ಬಾ ನಲ್ಲೆ ಮಧುಚಂದ್ರಕೆ (1993)
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಸಾಹಿತ್ಯ: ಪ್ರೊ. ಸಿದ್ಧಲಿಂಗಯ್ಯ
ಸಂಗೀತ: ಹಂಸಲೇಖ

**********************************************************************************************************************************

ಆ ಬೆಟ್ಟದಲ್ಲಿ
ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ
ಮಲ್ಲಿಗೆಯ ಮೈಯಾ
ಸುಟ್ಟಾವು ಬೆಳ್ಳಿ ಕಿರಣ
ಸುಟ್ಟಾವು ಬೆಳ್ಳಿ ಕಿರಣ
ಇಳಿಜಾರಿನಲ್ಲಿ
ಆ ಕಣಿವೆಯಲ್ಲಿ
ನೀ ಇಳಿಯಬೇಡ ಗೆಳತಿ
ಇಳಿಜಾರಿನಲ್ಲಿ
ಆ ಕಣಿವೆಯಲ್ಲಿ
ನೀ ಇಳಿಯಬೇಡ ಗೆಳತಿ
ನೀ ಇಳಿಯಬೇಡ ಗೆಳತಿ
ಆ ಕಣಿವೆಯಲ್ಲಿ
ತತ್ತರಿಸುವಂತೆ
ಕಾಲಲ್ಲಿ ಕಮಲ
ಮುತ್ತುವುವು ಮೊಲದ ಹಿಂಡು
ಮುತ್ತುವುವು ಮೊಲದ ಹಿಂಡು
ಈ ನನ್ನ ಎದೆಯ
ಹೂದೋಟದಲ್ಲಿ
ನೀನೆತ್ತ ಪ್ರೀತಿ ಬಳ್ಳಿ
ಈ ನನ್ನ ಎದೆಯ
ಹೂದೋಟದಲ್ಲಿ
ನೀನೆತ್ತ ಪ್ರೀತಿ ಬಳ್ಳಿ
ನೀನೆತ್ತ ಪ್ರೀತಿ ಬಳ್ಳಿ
ಹೂದೋಟದಲ್ಲಿ
ಫಲ ಕೊಟ್ಟಿತೇನೆ
ಹೂ ಬಿಟ್ಟಿತೇನೆ
ಉಲ್ಲಾಸವನ್ನು ಚೆಲ್ಲಿ
ಉಲ್ಲಾಸವನ್ನು ಚೆಲ್ಲಿ
ಈ ಊರಬನಕೆ
ಚೆಲುವಾದ ಒಂಟಿ
ಹೂವಾಗಿ ಅರಳಿ ನೀನು
ಈ ಊರಬನಕೆ
ಚೆಲುವಾದ ಒಂಟಿ
ಹೂವಾಗಿ ಅರಳಿ ನೀನು
ಹೂವಾಗಿ ಅರಳಿ ನೀನು
ಈ ಊರಬನಕೆ
ಮರೆಯಾಗಬೇಡ
ಮಕರಂದವೆಂದ
ದುಂಬಿಗಳ ದಾಳಿಯಲ್ಲಿ
ದುಂಬಿಗಳ ದಾಳಿಯಲ್ಲಿ
ಆ ಬೆಟ್ಟದಲ್ಲಿ
ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ
ಮಲ್ಲಿಗೆಯ ಮೈಯಾ
ಸುಟ್ಟಾವು ಬೆಳ್ಳಿ ಕಿರಣ
ಸುಟ್ಟಾವು ಬೆಳ್ಳಿ ಕಿರಣ
Mind Sharing?