ಚಿತ್ರ: ಸಂಯುಕ್ತ (1988)
ಗಾಯಕ: ಎಸ್.ಪಿ.ಬಾಲಸುಬ್ರಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
**********************************************************************************************************************************
ನಿನ್ನಂದ ಕಾಣಲೆಂದು
ಆ…ನಂದ ಹೊಂದಲೆಂದು
ಆ..ಕಾ..ಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ
ಭಾಮಿನಿ
ಆ…ಕಾ..ಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ
ಭಾಮಿನಿ
ಆ..ಕಾ..ಶ ಬಾಗಿದೆ
ಆಆ….. ಆ ಆ ಆ…ಆ ಆ
ತಂಗಾಳಿ ಬೀಸಿ ಬಂದು
ನಿನ್ನ ಹೂ ಮೈಯಿ ಸೋಕಿತೆ
ಅರಳಿದ
ಸುಮಗಳ
ಪರಿಮಳ ಚೆಲ್ಲಾಡೀತೆ
ಆ ರೆಂಬೆ ತೂಗಿ ತೂಗಿ
ಹೊಸ ಉಲ್ಲಾಸ ತೋರುತಾ
ಹಸುರಿನಾ
ಎಲೆಗಳ
ಚಾಮರ ಬೀಸಿತೇ
ಬಳ್ಳಿಲಿ ನಗುವ ಹೂವು
ಸೌಂದರ್ಯ ಕಾಣುವಾ
ಚಪಲದಿ
ಇಣುಕುತಾ
ನಸು ನಾಚಿ ನೋಡಿದೆ
ಆ..ಕಾ..ಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ
ಭಾಮಿನಿ…..
ಆ…ಕಾ…ಶ ಬಾಗಿದೆ……ಏಏಏಏ
ಎಲ್ಲಿಂದ ತಂದ ಕಣ್ಣೊ
ಇವಳೆಲ್ಲಿಂದ ಬಂದ ಹೆಣ್ಣೋ
ನಡೆಯಲು
ನಾಟ್ಯವು
ಮೌನವೆ ಸಂಗೀತವು
ಶೃಂಗಾರ ಕಾವ್ಯ ಒಂದು
ಹೊಸ ಹೆಣ್ಣಾಗಿ ಬಂದಿತೇನೋ
ಹವಳವೋ
ಅಧರವೋ
ಪ್ರಣಯದ ಚೆಲ್ಲಾಟವೊ
ಬಂಗಾರದಿಂದ ತಂದ
ಈ ತನುವ ಕಾಂತಿಗೆ
ಬಯಕೆಯು
ಮನಸನು
ಕೆಣಕಲು ನಾ ಸೋತೆನೇ
ಆ..ಕಾ..ಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ
ಭಾಮಿನಿ
ಆ..ಕಾ..ಶ ಬಾಗಿದೆ……ಏಏಏಏ