Mind Sharing?

ಚಿತ್ರ: ಕಾಮನ ಬಿಲ್ಲು(1983)
ಗಾಯಕ: ಡಾ. ರಾಜಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ನಿನ್ನ ಹವಳದಂತ ತುಟಿಗೆ ಇಂದು,
ಪ್ಪ್ ಎಂದು ನಾನು
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೇ…..
ನನ್ನ ಮುದ್ದು ರಾಜ
ನಿನ್ನ ಮೊಗವನ್ನು ಕಂಡಾಗ ನಾ….ಚಿ
ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ನೋಡಿ ಬೆರಗಾ….ಗಿ
ಕೃಷ್ಣ ಗುಡಿಯಲ್ಲಿ ಶಿಲೆಯಾದನು
ನೀನಾಡೋ ತೊದಲು ನುಡಿ
ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ
ಅರಗಿಣಿಯ ಮಾತಂತೆ
ಸವಿ ಜೇನ ಹನಿಯಂತೆ ನನ್ನ ಮುದ್ದು ರಾಜ
ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ನಿನ್ನ ಹವಳದಂತ ತುಟಿಗೆ ಇಂದು
ಪ್ಪ್ ಎಂದು ನಾನು
ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ನಕ್ಕು ನಲಿವಾಗ ಬೆಳದಿಂಗಳಂತೆ
ನೀನು ಅತ್ತಾಗ ಸಂಗೀತವೋ
ಅಂದ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೋ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ
ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ನಿನ್ನ ಹವಳದಂತ ತುಟಿಗೆ ಇಂದು
ಪ್ಪ್ ಎಂದು ನಾನು
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೇ
ನನ್ನ ಮುದ್ದು ರಾಜ
Mind Sharing?