Mind Sharing?

ಚಿತ್ರ: ಬಾ ನಲ್ಲೆ ಮಧುಚಂದ್ರಕೆ (1993)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಹಂಸಲೇಖ

**********************************************************************************************************************************

ಬಂದಾಳೋ ಬಂದಾಳೋ
ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ
ಚಂದಿರ ಚಕೋರಿ
ತಂದಾಳೊ
ತಂದಾಳೊ
ತಂದಾಳೊ ಪ್ರೇಮದ ಸಿರಿ
ಬಂದಾಳೋ ಬಂದಾಳೋ
ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ
ಚಂದಿರ ಚಕೋರಿ
ಮಳೆಬಿಲ್ಲ ಮೇಲೆ
ಇಳಿಜಾರೋ ಬಾಲೆ
ರತಿದೇವಿ ಸೌಂದರ್ಯ ಸವತಿ ನೀ
ಕವಿತೆ ನೀ
ಕಾವ್ಯ ಸ್ಪೂರ್ತಿ ನೀ
ಎದೆಯಾಳದೊಲವು
ಹೆಣ್ಣಾಗಿ ಬಂದ
ಭೂಲೋಕ ಸೌಂದರ್ಯ ರಾಣಿ ನೀ
ಪ್ರಾಣ ನೀ
ನೀಲವೇಣಿ ನೀ
ನಕ್ಕಳೋ ನಕ್ಕಳೋ
ಹುಣ್ಣಿಮೆ ಹಾಲಂತೆ
ಉಕ್ಯಾಳೋ ಉಕ್ಯಾಳೋ
ತುಂಗೆಯ ನೀರಂತೆ
ಜೀ…..ವನದ
ಚಂದ್ರೋ ದಯಕೆ
ಮೈ….ಮನದ ಪ್ರಣಯಾಲಯಕೆ
ಬಂದಾಳೋ ಬಂದಾಳೋ
ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ
ಚಂದಿರ ಚಕೋರಿ
ತಂದಾಳೊ
ತಂದಾಳೊ
ತಂದಾಳೊ ಪ್ರೇಮದ ಸಿರಿ
ಬಂದಾಳೋ ಬಂದಾಳೋ
ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ
ಚಂದಿರ ಚಕೋರಿ
ಮಲೆನಾಡ ಸಿರಿಗೆ
ಮನಸೋತು ನಿಂತ
ಹಸಿರೂರ ಗಿರಿಬಾಲೆ ಹೆಣ್ಣು ನೀ
ಕಣ್ಣು ನೀ
ಬಾಳ ಬಣ್ಣ ನೀ
ನಡುರಾತ್ರಿಯಲ್ಲಿ
ಜಲರಾಶಿ ಮೇಲೆ
ಗುರಿತೋರೋ
ಏಕಾಂತ ತಾರೆ ನೀ
ನೀರೆ ನೀ
ಕಾವ್ಯಧಾರೆ ನೀ
ಮೂಡ್ಯಾಳೋ ಮೂಡ್ಯಾಳೋ
ಮಾಗಿಯ ಕನಸಂತೆ
ಮುತ್ಯಾಳೋ ಮುತ್ಯಾಳೋ
ಬೆಚ್ಚನೆ ಮುತ್ತಂತೆ
ಜೀ….ವನದ
ಚಂದ್ರೋದಯಕೆ
ಮೈ….ಮನದ ಪ್ರಣಯಾಲಯಕೆ
ಬಂದಾಳೋ ಬಂದಾಳೋ
ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ
ಚಂದಿರ ಚಕೋರಿ
ತಂದಾಳೊ
ತಂದಾಳೊ
ತಂದಾಳೊ ಪ್ರೇಮದ ಸಿರಿ
ಬಂದಾಳೋ ಬಂದಾಳೋ
ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ
ಚಂದಿರ ಚಕೋರಿ
Mind Sharing?