Mind Sharing?

ಚಿತ್ರ: ಬಂಧನ (1984)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್

**********************************************************************************************************************************

ಹೆಣ್ಣು: ಬಣ್ಣ………
ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ
ಬಣ್ಣ….. ಬಣ್ಣ……
ಬಣ್ಣ…… ಬಣ್ಣ……
ಗಂಡು: ಬಣ್ಣ………
ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ
ಬಣ್ಣ…… ಬಣ್ಣ…….
ಬಣ್ಣ…… ಬಣ್ಣ…….
ಗಂಡು: ಈ ನೀಲಿ ಮೋಹಕ ಕಣ್ಣ
ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆ ತುಂಬಾ
ಆ ಸಂಜೆ ಓಕುಳಿ ಬಣ್ಣ
ಹೆಣ್ಣು: ನೀ ತಂದೆ ಬಾಳಲಿ ಇಂದು
ನೂರೊಂದು ಕನಸಿನ ಬಣ್ಣ
ಮನಸೇಂಬ ತೋಟದಲ್ಲಿ
ಹೊಸಪ್ರೇಮ ಹೂವಿನ ಬಣ್ಣ
ಗಂಡು: ಬಾನಿನಿಂದ ಜಾರಿ ಬಂದ ಕಾಮನ ಬಿಲ್ಲು
ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲು
ಹೆಣ್ಣು: ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ
ಏನೋ ಮೋಡಿ ಮಾಡಿ ಇಂದು ಕಾಡಿದೆ ಎನ್ನ
ಬಣ್ಣ……… ಬಣ್ಣ……. ಬಣ್ಣ……
ಗಂಡು: ಬಣ್ಣ……
ನನ್ನ ಒಲವಿನ ಬಣ್ಣ
ಹೆಣ್ಣು: ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ
ಗಂಡು: ಕರಿ ಮೋಡಕಿಂತ ಸೊಗಸು
ಮುಂಗುರುಳ ಮೋಹಕ ಬಣ್ಣ…….
ಬಿಳಿದಂತಕಿಂತ ಚೆಲುವು
ನಿನ್ನೊಡಲ ಕಾಂತಿಯ ಬಣ್ಣ
ಹೆಣ್ಣು: ನೊರೆಹಾಲಿಗಿಂತ ಬಿಳುಪು
ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೆ
ತಂಪಾದ ಮಾತಿನ ಬಣ್ಣ
ಗಂಡು: ನೀಲಿ ಕಡಲಂತೆ ನಿನ್ನ ಪ್ರೀತಿ ಆಳವು
ಮುತ್ತು ರತ್ನ ಪಚ್ಛೆಯಂತೆ ನಿನ್ನ ಸ್ನೇಹವು
ಹೆಣ್ಣು: ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು
ಕಾಲದಲ್ಲಿ ಮಾಸದಂತ ಗಟ್ಟಿ ಬಣ್ಣವು
ಗಂಡು: ಬಣ್ಣ…… ಬಣ್ಣ…….. ಬಣ್ಣ
ಹೆಣ್ಣು: ಬಣ್ಣ………
ನನ್ನ ಒಲವಿನ ಬಣ್ಣ
ಗಂಡು: ನನ್ನ ಬದುಕಿನ ಬಣ್ಣ
ಗಂಡು+ಹೆಣ್ಣು: ನನ್ನ ಬದುಕಿನ ಬಣ್ಣ
Mind Sharing?