Mind Sharing?

ಚಿತ್ರ: ಬೆಂಕಿಯ ಬಲೆ (1983)
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

**********************************************************************************************************************************

ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನು
ಮಳೆಯಾದರೇನು
ಜೊತೆಯಾಗಿ ಇಂದು
ನಾನಿಲ್ಲವೇನು
ನೀ ನನ್ನ ಜೀವಾ ಎಂದಿಗೂಉಉಉಉ
ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನು
ಹೂವು ಹಾವಾದರೇನು
ಹಾಲು ವಿಷವಾದರೇನು
ಹೂವು ಹಾವಾದರೇನು
ಹಾಲು ವಿಷವಾದರೇನು
ಈ ನಿನ್ನ ನೋಟ ಬೆರೆತಾಗ
ಮುಳ್ಳು ಹೂವಾಗಿ ಅರಳದೇನು
ಭುವಿಯೇ ಬಾಯ್ ಬಿಟ್ಟರೇನು
ಸಿಡಿಲೇ ಎದುರಾದರೇನು
ನನ್ನಾಣೆ ನಲ್ಲೇ
ನಾ ನಿನ್ನ ಬಿಡೆನು
ಪ್ರಾಣಕ್ಕೆ ಪ್ರಾಣ ಕೊಡುವೆ
ಕಂಬನಿ
ಮಿಡಿಯದೆ
ಇನ್ನು ನಗಲಾರೆ ಏನು
ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನುಉಉಉಉಉ
ಸೆಳೆವ ಸುಳಿಯಾದರೇನು
ಬೆಂಕಿಯ ಬಲೆಯಾದರೇನು
ಸೆಳೆವ ಸುಳಿಯಾದರೇನು
ಬೆಂಕಿಯ ಬಲೆಯಾದರೇನು
ಈ ಬಾಳು ಎಂದು ಹೋರಾಟ ತಾನೆ
ಬಿಡು ಇನ್ನು ಚಿಂತೆಯನ್ನು
ಯಾರೇನು ಅಂದರೇನು
ಊರೆ ಎದುರಾದರೇನು
ಕೊನೆತನಕ ನಾನು ಹೋರಾಡಿ ಗೆಲುವೇ
ನಿನ್ನನ್ನು ನಾನು ಬಿಡೆನು
ಕೊರಗದೆ
ನಡುಗದೆ
ನಲ್ಲೇ ನಗಲಾರೆಯೇನು
ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನುಉಉಉಉಉ
Mind Sharing?