Mind Sharing?

ಚಿತ್ರ: ಬೆಂಕಿಯ ಬಲೆ (1983)
ಗಾಯಕರು: ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

**********************************************************************************************************************************

ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನು
ಮಳೆಯಾದರೇನು
ಜೊತೆಯಾಗಿ ಎಂದು
ನಾನಿಲ್ಲವೇನು
ಈ ಚಿಂತೆ ಏಕೆ ಹೇಳಿರಿ……
ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನು
ಬೆಂಕಿ ಮಳೆಯಾದರೇನು
ಸಿಡಿಲು ಗುಡುಗಾದರೇನು
ಬೆಂಕಿ ಮಳೆಯಾದರೇನು
ಸಿಡಿಲು ಗುಡುಗಾದರೇನು
ನಾನೆಂದು ಭಯವ ಪಡಲಾರೆ
ನಲ್ಲ ನೀವಿರಲು ಸಾಲದೇನು
ಸೆಳೆವ ಸುಳಿಯಾದರೇನು
ನೆಲವೆ ಬಾಯ್ಬಿಟ್ಟರೇನು
ಈ ಬಾಳು ಒಂದು ಹೋರಾಟ
ತಾನೆ ಬಿಡಿ ಇನ್ನು ಚಿಂತೆಯನ್ನು
ಕೊರಗದೆ
ನಡುಗದೆ
ನಲ್ಲ ನಗಬಾರದೇನು
ಬಿಸಿಲಾದರೇನು
ಮಳೆಯಾದರೇನು
ಬಿಸಿಲಾದರೇನು
ಸಿರಿಯ ನಾ ಬೇಡಲಿಲ್ಲ
ಸುಖವ ನಾ ಕೇಳಲಿಲ್ಲ
ಸಿರಿಯ ನಾ ಬೇಡಲಿಲ್ಲ
ಸುಖವ ನಾ ಕೇಳಲಿಲ್ಲ
ಎಂದೆಂದು ನೀವು ನಗುನಗುತಲಿರಲು
ಅದಕ್ಕಿಂತ ಹರುಷವಿಲ್ಲ
ಕಷ್ಟ ಹೊಸದೇನು ಅಲ್ಲ
ಶಾಂತಿ ನಾ ಕಾಣಲಿಲ್ಲ
ನೋವಲ್ಲೆ ಹುಟ್ಟಿ ನೋವಲ್ಲೆ ಬೆಂದೆ
ನೋವೆ ನನಗೆಂದು ಇಲ್ಲ
ನಿಮ್ಮನು
ಬಿಟ್ಟರೆ
ನನಗೆ ಗತಿಯಾರು ಇಲ್ಲ
ಬಿಸಿಲಾದರೇನು
ಮಳೆಯಾ…….ದರೇನು
ಬಿಸಿಲಾದರೇ…….ನುಉಉಉಉಉ
Mind Sharing?