Mind Sharing?

ಚಿತ್ರ: ಹುಲಿಯ ಹಾಲಿನ ಮೇವು [1979]
ಗಾಯಕರು: ಡಾ: ರಾಜಕುಮಾರ್, ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್

**********************************************************************************************************************************

ಗಂಡು: ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ
ಓ ಓ ಓ
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ
ಓ ಓ ಓ
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ಹೆಣ್ಣು: ಲ ಲ ಲಾ ಲಾ ಲಾ ಲಾ ಲಾ
ಗಂಡು: ಲಾ ಲಾ ಲಾ ಆ ಹ ಅಹ ಅಹ ಆ
ಹೆಣ್ಣು: ಲ ಲಾ ಲ
ಗಂಡು: ಹ್ಮ್ ಹ್ಮ್ ಹ್ಮ್
ಹೆಣ್ಣು: ಮಾತಲ್ಲೆ ಜೇನು ತುಂಬಿ
ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು
ನೀ ಹಿಂದೆ ಓಡುವೇ
ಗಂಡು: ನಿನ್ನನ್ನು ಕಂಡ ಕಣ್ಣು
ಬೇರೇನೂ ನೋಡದಿನ್ನು
ನಿನ್ನನ್ನು ಕಂಡ ಕಣ್ಣು (ಹೆಣ್ಣು: ಹ)
ಬೇರೇನೂ ನೋಡದಿನ್ನು
ನಿನಗಾಗಿಯೆ
ಬಾಳುವೆ ಇನ್ನು ನಾನುಉಉಉಉ
ಹೆಣ್ಣು: ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು
ನನ್ನ ನೆನಪು ಬಂದಾಗ
ಮೊಗವಾ ಕಂಡಾಗ
ಒಲವು ಬೇಕೆಂದು ಬರುವೆಏಏಏಏಏ
ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು (ಗಂಡು: ಹ್ಮ್ ಹ್ಮ್) (ನಗುವುದು)

ಗಂಡು: ಆ ಸೂರ್ಯ ಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ
ಈ ನಮ್ಮ ಪ್ರೀತಿಯು

ಹೆಣ್ಣು: ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಆನಂದದಾ
ಕಂಬನಿ ತಂದೆ ನೀನು
ಓ ಓ ಓ
ಗಂಡು: ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ (ಹೆಣ್ಣು: ಊಹೂ)
ಹೆಣ್ಣು: ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು (ಗಂಡು: ಆಹಾ)
ಗಂಡು: ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ
ಓ ಓ ಓ
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
Mind Sharing?