Mind Sharing?

ಚಿತ್ರ: ಚಂದನದ ಗೊಂಬೆ (1979)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್

***************************************************************************************

ಗಂಡು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಹೆಣ್ಣು: ನನ್ನ ತುಂಬ ನೀನೆ
ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು
ಮನಸು ಕೊಡುವುದೇನು
ಗಂಡು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಹೆಣ್ಣು: ಒಲವನು
ತೋರಿದೆ
ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೆ
ನಿನ್ನನ್ನು ಸೇರಿದೆ
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಗಂಡು: ಅಹಾ ಅಹಾ
ಹೆಣ್ಣು: ಆ.. ಆ.. ಆಆಆಆ
ಗಂಡು: ಕಾಣದ
ಅನುಭವ
ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ……
ಸಂಕೋಚ ಓಡಿದೆ ……
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ
ಹೆಣ್ಣು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಗಂಡು: ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಗಂಡು: ನಾಚಿಕೆ
ಎನ್ನುತ
ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ
ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ
ಇಂದು ನುಡಿಸಿದೆ
ಹೆಣ್ಣು: ಆಹಾ ಆಹಾ
ಗಂಡು: ಆ..ಆ….ಆಆಆಆ
ಹೆಣ್ಣು: ಏನನು
ಅರಿಯದ
ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ
ನನ್ನೆದೆಯ ತಾಳಕೆ
ಹೊಸ ಬಾಳಗೀತೆ ಇಂದು
ನೀನು ಹಾಡಿದೆ
ಹೊಸ ಬಾಳಗೀತೆ ಇಂದು ನೀನು ಹಾಡಿದೆ
ಗಂಡು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಹೆಣ್ಣು: ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಗಂಡು: ನನ್ನ ತುಂಬ ನೀನೆ
ತುಂಬಿ ಕೊಂಡ ಮೇಲೆ
ಹೆಣ್ಣು: ಇನ್ನು ನನ್ನದೇನು
ಮನಸು ಕೊಡುವುದೇನು
ಗಂಡು+ಹೆಣ್ಣು: ಲಲಲ….ಲಲ…ಲಲ
ಲಲಲಲ…ಲಲ
ಲಲಲ….ಲಲ…ಲಲ
ಲಲಲಲ…ಲಲ
Mind Sharing?