ಗಂಡು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು ಹೆಣ್ಣು: ನನ್ನ ತುಂಬ ನೀನೆ
ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು
ಮನಸು ಕೊಡುವುದೇನು ಗಂಡು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಹೆಣ್ಣು: ಒಲವನು
ತೋರಿದೆ
ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೆ
ನಿನ್ನನ್ನು ಸೇರಿದೆ
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ ಗಂಡು: ಅಹಾ ಅಹಾ ಹೆಣ್ಣು: ಆ.. ಆ.. ಆಆಆಆ ಗಂಡು: ಕಾಣದ
ಅನುಭವ
ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ……
ಸಂಕೋಚ ಓಡಿದೆ ……
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ ಹೆಣ್ಣು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು ಗಂಡು: ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಗಂಡು: ನಾಚಿಕೆ
ಎನ್ನುತ
ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ
ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ
ಇಂದು ನುಡಿಸಿದೆ ಹೆಣ್ಣು: ಆಹಾ ಆಹಾ ಗಂಡು: ಆ..ಆ….ಆಆಆಆ ಹೆಣ್ಣು: ಏನನು
ಅರಿಯದ
ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ
ನನ್ನೆದೆಯ ತಾಳಕೆ
ಹೊಸ ಬಾಳಗೀತೆ ಇಂದು
ನೀನು ಹಾಡಿದೆ
ಹೊಸ ಬಾಳಗೀತೆ ಇಂದು ನೀನು ಹಾಡಿದೆ ಗಂಡು: ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು ಹೆಣ್ಣು: ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು ಗಂಡು: ನನ್ನ ತುಂಬ ನೀನೆ
ತುಂಬಿ ಕೊಂಡ ಮೇಲೆ ಹೆಣ್ಣು: ಇನ್ನು ನನ್ನದೇನು
ಮನಸು ಕೊಡುವುದೇನು ಗಂಡು+ಹೆಣ್ಣು: ಲಲಲ….ಲಲ…ಲಲ
ಲಲಲಲ…ಲಲ
ಲಲಲ….ಲಲ…ಲಲ
ಲಲಲಲ…ಲಲ