ಚಿತ್ರ: ದೇವತಾ ಮನುಷ್ಯ (1988)
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
**********************************************************************************************************************************
ಗಂಡು: ಈ ಸೊಗಸಾದ ಸಂಜೆ
ಈ ಸೊಗಸಾದ ಸಂಜೆ
ನಿನ್ನನ್ನು ನೋಡುತ
ನನ್ನನ್ನೇ ಮರೆತೆ
ಎಂದೆಂದೂ
ಜೊತೆ ಇರುವ
ಬಯಕೆ ಇಂದು ಏಕೆ
ಹೆಣ್ಣು: ಈ ಸೊಗಸಾದ ಸಂಜೆ
ನಿನ್ನನ್ನು ನೋಡುತ
ನನ್ನನ್ನೇ ಮರೆತೆ
ಎಂದೆಂದೂ
ಜೊತೆ ಇರುವ
ಬಯಕೆ ಇಂದು ಏಕೆ
ಗಂಡು: ಈ ಸೊಗಸಾದ ಸಂಜೆ
ಗಂಡು: ನಲ್ಲೆಯು ಮೂಡಿದ
ಮಲ್ಲಿಗೆ ಹೂವು
ಪ್ರೇಮದ ಗೀತೆ
ಹಾಡಿದೆ ಇಂಪಾಗಿ
ಕಂಪನ್ನು ಚೆಲ್ಲಿದೆ ಹಿತವಾಗಿ
ಹೆಣ್ಣು: ನಲ್ಲನ ನುಡಿಯೊ
ಕೊಳಲಿನ ದನಿಯೊ
ಕಾಣೆನೆ ನಾನು
ಕೇಳುತ ಬೆರಗಾಗಿ
ಸಂತೋಷ ತುಂಬಿತು ತಾನಾಗಿ
ಗಂಡು: ಓ….. ಓ ಓ ಓ ಓಹೊ…..
ಪ್ರೇಮದ ಗಂಗೆ
ಪ್ರಣಯದ ತುಂಗೆ
ನಲ್ಲೆಯ ಮಾತುಗಳೆಲ್ಲ
ಹೆಣ್ಣು: ಈ ಸೊಗಸಾದ ಸಂಜೆ
ನಿನ್ನನ್ನು ನೋಡುತ
ನನ್ನನ್ನೇ ಮರೆತೆ
ಗಂಡು+ಹೆಣ್ಣು: ಎಂದೆಂದೂ
ಜೊತೆ ಇರುವ
ಬಯಕೆ ಇಂದು ಏಕೆ
ಈ ಸೊಗಸಾದ ಸಂಜೆ
ಹೆಣ್ಣು: ಗೆಳೆಯೆನೆ ನಿನ್ನ
ಕಣ್ಣಲಿ ಇಂದು
ಪ್ರೇಮದ ಲೋಕ
ನೋಡಿದೆ ನಾನೀಗ
ನನ್ನಲ್ಲಿ ಮೂಡಿತು ಅನುರಾಗ
ಗಂಡು: ಅರಗಿಣಿ ಕೂಡ
ನಾಚಿತು ನಿನ್ನ
ಮಾತನು ಕೇಳಿ
ಹಾರಿದೆ ಓ ಜಾಣೆ
ನಿನ್ನಂತೆ ಯಾರನು ನಾ ಕಾಣೆ
ಹೆಣ್ಣು: ಓ….. ಓ ಓ ಓ ಓಹೊ…..
ಬಾಳಲಿ ಸರಸ
ತುಂಬಿದ ಕಳಸ
ಪ್ರೇಮವು ತುಂಬಿರುವಾಗ
ಗಂಡು: ಈ ಸೊಗಸಾದ ಸಂಜೆ
ನಿನ್ನನ್ನು ನೋಡುತ
ನನ್ನನ್ನೇ ಮರೆತೆ
ಎಂದೆಂದೂ
ಜೊತೆ ಇರುವ
ಬಯಕೆ ಇಂದು ಏಕೆ
ಹೆಣ್ಣು: ಈ ಸೊಗಸಾದ ಸಂಜೆ
ನಿನ್ನನ್ನು ನೋಡುತ
ನನ್ನನ್ನೇ ಮರೆತೆ
ಗಂಡು+ಹೆಣ್ಣು: ಎಂದೆಂದೂ
ಜೊತೆ ಇರುವ
ಬಯಕೆ ಇಂದು ಏಕೆ
ಈ ಸೊಗಸಾದ ಸಂಜೆ
ನಿನ್ನನ್ನು ನೋಡುತ
ನನ್ನನ್ನೇ ಮರೆತೆ