Mind Sharing?

ಚಿತ್ರ: ಮಯೂರ (1975)
ಗಾಯಕರು: ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ.ಕೆ. ವೆಂಕಟೇಶ್

**********************************************************************************************************************************

ಆಆಆಆ … ಆಹ
ಹೂಂ………… ಹೂಂ
ಅಹ…ಅಹ…..ಆ ಆ ಆ ಆ
ಹಗಲೊ ಇರುಳೊ
ನನಗೊಂದು ತೋರದಿಂದು
ಏನೊ ನೋವು
ಮನದಲ್ಲಿ ನಿಂತು ನೀ ಕಾಡಿರಲು
ಹಗಲೊ ಇರುಳೊ
ನನಗೊಂದು ತೋರದಿಂದು
ಆಕಾಶದಿಂದ ಧರೆಗೆ
ನನಗಾಗಿ ಬಂದೆಯೇನೊ
ಆಕಾಶದಿಂದ ಧರೆಗೆ
ನನಗಾಗಿ ಬಂದೆಯೇನೊ
ನಿನ್ನಾ ನುಡಿ ಜೇನ
ಸವಿದಾಗ ನನ್ನೆ ನಾ ಮರೆತೆ
ಹಗಲೊ ಇರುಳೊ
ನನಗೊಂದು ತೋರದಿಂದು
ಏನೊ ನೋವು
ಮನದಲ್ಲಿ ನಿಂತು ನೀ ಕಾಡಿರಲು
ಏಕೊ ನಿನ್ನಲ್ಲೇ ಮನಸು
ನಿನ್ನ ನೆನಪಿನಲೇ ಸೊಗಸು
ಏಕೊ ನಿನ್ನಲ್ಲೇ ಮನಸ್ಸು
ನಿನ್ನ ನೆನಪಿನಲ್ಲೆ ಸೊಗಸು
ಚೆಲುವ ನೀ ಬರುವ
ಕ್ಷಣಕ್ಕಾಗಿ ಕಾದು ಸೋತಿರುವೆ
ಹಗಲೊ ಇರುಳೊ
ನನಗೊಂದು ತೋರದಿಂದು
ಏನೊ ನೋವು
ಮನದಲ್ಲಿ ನಿಂತು ನೀ ಕಾಡಿರಲು
ಮಾತಲ್ಲಿ ಹೇಳಲಾರೆ
ನಾ ಮೂಕಾಗಿ ನಿಲ್ಲಲಾರೆ
ಮಾತಲ್ಲಿ ಹೇಳಲಾರೆ
ನಾ ಮೂಕಾಗಿ ನಿಲ್ಲಲಾರೆ
ಇನಿಯ ಈ ಹೃದಯ
ಒಲವಿಂದ ನಿನ್ನ ಕೂಗಿರಲು
ಹಗಲೊ ಇರುಳೊ
ನನಗೊಂದು ತೋರದಿಂದು
ಏನೊ ನೋವು
ಮನದಲ್ಲಿ ನಿಂತು
ನೀ ಕಾಡಿರಲು
ಹ್ಮ್ ಹ್ಮ್ ಹ್ಮ್ ಹ್ಮ್
Mind Sharing?