ಚಿತ್ರ : ನಾ ನಿನ್ನ ಬಿಡಲಾರೆ (1979)
ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ : ರಾಜನ್-ನಾಗೇಂದ್ರ
ಸಾಹಿತ್ಯ : ಚಿ. ಉದಯ ಶಂಕರ್
**********************************************************************************************************************************
ಗಂಡು: ಹ್ಮ್….ಹ್ಮ್….ಹ್ಮ್….
ಹಾ… ಆಹಾ
ಹಾ ಹಾ ಹಾ ಹಾ ಹಾ….
ಗಂಡು: ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಬಾಳಿಗೆ ನೀ… ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾಗ
ಹೊಸ ತಾಳ
ಹೊಸ ಭಾ..ವ ಗೀತೆಯೇ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾತ್ರಿ ಮೂಡಿ ಬಂದು
ಹೊಸ ಆಸೆ ನೂ..ರು ತಂದು
ಹೊಸ ಸ್ನೇಹದಿಂದ ಬೆಸೆದು
ಹೊಸ ರಾಗ ಮೀ..ಟಿ ಇಂದು
ಹಿತ ನೀಡಿದೆ
ಸುಖ ತೋರಿದೆ
ಮನದಲ್ಲಿ ಉಲ್ಲಾಸ ತಂದು
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೆಣ್ಣು: ಆ…….ಆಆಆಆ
ಆಆಆ……..ಆ ಆ ಆ ಆ ಆ
ಆ……ಆಆಆ
ಗಂಡು: ನಸು ನಾಚಿದಾಗ ಮೊಗವು
ಕೆಂಪಾದ ಹೊನ್ನ ಹೂವು
ಹೆಣ್ಣು: ಆ……ಆಆಆ…..ಆಆಆ….
ಗಂಡು: ನಡೆವಾಗ ನಿನ್ನ ನಡುವು
ಲತೆಯೆಂತೆ ಆಡೋ ಚೆಲುವು
ಕಣ್ಣ್ತುಂಬಿತು ಮನ ತುಂಬಿತು
ಅನುರಾಗ ನನ್ನಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೂಮಂಚ ಹೀಗೆ ಇರಲಿ
ಈ ಮಲ್ಲಿಗೆ ಬಾ..ಡದಿರಲಿ
ಈ ರಾತ್ರಿ ಜಾರದಿರಲಿ
ಹಗಲೆಂದು ಮೂ..ಡದಿರಲಿ
ಬೆಳದಿಂಗಳ ಈ ಬೊಂಬೆ
ಬಳಿಯಲ್ಲೇ ಎಂದೆಂದೂ ಇರಲಿ
ಹೆಣ್ಣು: ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಗಂಡು: ಆ……ಹೊಸ ರಾಗ
ಹೆಣ್ಣು: ಹೊಸ ತಾಳ
ಗಂಡು+ಹೆಣ್ಣು: ಹೊಸ ಭಾವ ಗೀತೆಯೇ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ