ಚಿತ್ರ: ಹೊಸ ಬೆಳಕು (1982)
ಗಾಯಕ: ಡಾ: ರಾಜಕುಮಾರ್
ಸಂಗೀತ: ಎಂ. ರಂಗ ರಾವ್
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಹೊಸ ಬೆಳಕು…. ಮೂಡುತಿದೆ
ಬಂಗಾರದ…….. ರಥವೇರುತ
ಆಕಾಶದಿ ಓಡಾಡುತಾ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದ
ಕಾಂತಿಯ……… ರವಿ ಕಾಂತಿಯ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ
ಬೆಳಕು ಬಂತೆಂದು ಹಾಡಿ
ಹಕ್ಕಿ ಮುಗಿಲನ್ನು ನೋಡಿ
ಬೆಳಕು ಬಂತೆಂದು ಹಾಡಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ
ಹಾರಿದೆ
ಹೊಸ ಬೆಳಕು ಮೂಡುತಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೋ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೋ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ
ಹಾಡಿದೆ
ಹೊಸ ಬೆಳಕು………. ಮೂಡುತಿದೆ
ಬಂಗಾರದ ರಥವೇರುತ
ಆಕಾಶದಿ ಓಡಾಡುತಾ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದ
ಕಾಂತಿಯ………ರವಿ ಕಾಂತಿಯ