ಚಿತ್ರ: ಪ್ರೇಮಲೋಕ(1987)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
**********************************************************************************************************************************
ಗಂಡು: ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು: ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಇದು ನನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು: ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಹೆಣ್ಣು: ಕೇಳೋಸರದಾರ
ಚುಕ್ಕಿಗಳಂತೆ ನಾನು ನೀನು
ಬಾನಿನಲ್ಲಿ ಬಾ
ಕೇಳೋ ಹಮ್ಮೀ….ರ
ಹಕ್ಕಿಗಳಂತೆ ನಾನು ನೀನು
ಬಾಳಿನಲ್ಲಿ ಬಾ
ಗಂಡು: ಏಳು ಬಣ್ಣಗಳ ಕಾಮನಬಿಲ್ಲು
ನಮ್ಮದೇನೆ ಪ್ರೇಮತೋಟ ಮಾಡುವ…..
ಹೆಣ್ಣು: ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ
ಈ ನಮ್ಮ ಪ್ರೇಮರಾಗ ಹಾಡುವಾಆಆಆಆಆ
ಗಂಡು: ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು: ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಗಂಡು: ಕೇಳೇ ಸಿಂಗಾರಿ
ಹೂವಲ್ಲಿ ದುಂಬಿ ಸೇರಿಕೊಳ್ಳೊ
ಹೊತ್ತು ಇದು ಬಾ
ಕೇಳೇ ಬಂಗಾರಿ
ಪ್ರೇಮಿಗಳಿಲ್ಲಿ ನೀಡಿಕೊಳ್ಳೋ
ಮುತ್ತು ಇದು ಬಾಬಾ
ಹೆಣ್ಣು: ನನ್ನ ನಿನ್ನ ಸ್ನೇಹ ಬಂಧನವಿದು
ಮರೆಯಲಾಗದು
ಅಳಿಸಲಾಗದೆಂದಿಗೂ
ಗಂಡು: ಕೇಳೆನ್ನ ಗೆಳತಿ
ಇನ್ನೊಂದು ಸರತಿ
ಜನ್ಮವನ್ನೆತ್ತಿದರು ನಾವೊಂದೇಏಏಏಏಏಏ
ಹೆಣ್ಣು: ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು: ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು