ಚಿತ್ರ: ಕಾಮನ ಬಿಲ್ಲು (1983)
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
**********************************************************************************************************************************
ಗಂಡು: ಇಂದು ಆನಂದ ನಾ ತಾಳಲಾರೆ
ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇಏಏಏಏಏ
ಹೆಣ್ಣು: ಇಂದು ಆನಂದ ನಾ ತಾಳಲಾರೆ
ನಲ್ಲ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವನೇಏಏಏಏಏ
ಗಂಡು: ಬಳಸುತಿದೆ ಲತೆ ಬಳಸುತಿದೆ
ಆಸರೆ ಬೇಕೆಂದು ಮರವನ್ನು
ನಮ್ಮಂತೆ ಅನುರಾಗದೀ……
ಹೆಣ್ಣು: ನಲಿಯುತಿದೆ ಹೊಸ ಹೂಗಳಲಿ
ಜೇನನ್ನು ಹೀರುತ್ತ ದುಂಬಿಗಳು
ನಮ್ಮಂತೆ ಉಲ್ಲಾಸದೀ..
ಗಂಡು: ನೋಡು ಈ ಸಂಜೆಯಲ್ಲಿ
ಬೀಸೋ ತಂಪಾದ ಗಾಳಿ
ಬಂದು ಸುಯ್ ಎಂದು ಹಾಡಿ
ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವಳೇ…
ಹೆಣ್ಣು: ಇಂದು ಆನಂದ ನಾ ತಾಳಲಾರೆ
ನನ್ನ ಮಾತಲ್ಲಿ ನಾ ಹೇಳಲಾರೆ
ಗಂಡು: ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇಏಏಏಏಏ
ಹೆಣ್ಣು: ಹರಿಯುತಿದೆ ನದಿ ಹರಿಯುತಿದೆ
ಸಾಗರ ಎಲ್ಲೆಂದು ಹುಡುಕುತಿದೆ
ನಮ್ಮಂತೆ ಒಂದಾಗಲು…
ಗಂಡು: ಕರೆಯುತಿದೆ ಎಲೆ ಮರೆಯಲ್ಲಿ
ಕೋಗಿಲೆಯೊಂದು ಹಾಡುತಿದೆ
ಸಂಗಾತಿಯ ಸೇರಲು…
ಹೆಣ್ಣು: ನೋಡು ಬಾನಂಚಿನಲ್ಲಿ
ಸಂಜೆ ರಂಗನ್ನು ಚೆಲ್ಲಿ
ನಮಗೆ ಶುಭವನ್ನು ಕೋರಿ
ನನ್ನಾ ಬಳಿ ಹೇಳಿದೆ
ನೀನೆಂದೆಂದು ನನ್ನವನೇ…
ಗಂಡು: ಇಂದು ಆನಂದ ನಾ ತಾಳಲಾರೆ
ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇ…
ಹೆಣ್ಣು: ಇಂದು ಆನಂದ ನಾ ತಾಳಲಾರೆ
ನಲ್ಲ ಮಾತಲ್ಲಿ ನಾ ಹೇಳಲಾರೆ
ಗಂಡು+ಹೆಣ್ಣು: ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ಹೆಣ್ಣು: ನೀನೆಂದೆಂದು ನನ್ನವನೇ
ಗಂಡು: ನೀನೆಂದೆಂದು ನನ್ನವಳೇ..
ಗಂಡು+ಹೆಣ್ಣು: ಲಾ….ಲಾಲಾಲ ಲಾ….ಲಲ