ಚಿತ್ರ: KGF-1 (ಮೂಲ: ಪರೋಪಕಾರಿ)
ಗಾಯನ: ಐರಾ ಉಡುಪಿ (ಮೂಲ: ಎಲ್.ಆರ್. ಈಶ್ವರಿ)
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರವಿ ಬಸ್ರುರ್(ಮೂಲ: ಉಪೇಂದ್ರ ಕುಮಾರ್)
*************************************************************************************************************************
ಹೇಯ್ ಜೋ…………ಕೆ
ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು
ಜೋ……….ಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು
ಸೊಂಟ ಬಳಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂಧಿ ಆವಾಗ
ಸೊಂಟ ಬಳಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂಧಿ ಆವಾಗ
ಚಂದದ ಕೆಂದುಟಿ ಜೇನು ಹೀರುವ ದುಂಬಿಯಾಗುವ
ಆದರೆ ನಂತರ ಮತ್ತು ಬಂದರೆ
ನಿಧಾನ ನಿಧಾನ
ಜೋ………..ಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು
ಏನು ಹುಡುಕುವೆ ನೀನು
ನನ್ನಂದ ನೋಡಿ ಏನು
ನನಗಿಂತ ರತಿ ಬೇಕೇನು
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚಿನ್ನ
ಏನು ಹುಡುಕುವೆ ನೀನು
ನನ್ನಂದ ನೋಡಿ ಏನು
ನನಗಿಂತ ರತಿ ಬೇಕೇನು
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚಿನ್ನ
ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯಾ ಜಾಲದಿ ತಬ್ಬಿ ಓಡುವ ವಿಧಾನ ವಿಧಾನ
ಜೋ…….ಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು