ಚಿತ್ರ: ಬಯಲುದಾರಿ (1977)
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಮ್
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
**********************************************************************************************************************************
ಗಂಡು: ಕನಸಲೂ ನೀನೇ
ಮನಸಲೂ ನೀನೇ
ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ
ನಿನ್ನಾಣೆ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ
ಬಿಡೆನು ಚಿನ್ನ
ಇನ್ನು ಎಂದೆಂದಿಗೂ
ನಿನ್ನನೆಂದೆಂದಿಗೂ
ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ
ನಿನ್ನಾಣೆ
ನನ್ನಾಣೆ ನಿನ್ನಾಣೆ
ಮೌನವೂ ಚೆನ್ನ
ಮಾತಲೂ ಚೆನ್ನ
ನಗುವಾಗ ನೀನಿನ್ನೂ ಚೆನ್ನ
ನೋಡಲು ಚೆನ್ನ
ಕಾಡಲು ಚೆನ್ನ
ನಿನಗಿಂತ ಯಾರಿಲ್ಲ ಚೆನ್ನ
ಹೆಣ್ಣು: ಸ್ನೇಹಕೆ ಸೋತೆ
ಮೋಹಕೆ ಸೋತೆ
ಕಂಡಂದೆ ನಾ ಸೋತು ಹೋದೆ
ಮಾತಿಗೆ ಸೋತೆ
ಪ್ರೀತಿಗೆ ಸೋತೆ
ಸೋಲಲ್ಲು ಗೆಲುವನ್ನೇ ಕಂಡೆ
ಗಂಡು: ಸೋಲಲ್ಲು ಗೆಲುವನ್ನೇ ಕಂಡೆ
ಹೆಣ್ಣು: ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ
ನಿನ್ನಾಣೆ
ನನ್ನಾಣೆ ನಿನ್ನಾಣೆ
ಗಂಡು: ಒಲಿದ ನಿನ್ನ
ಬಿಡೆನು ಚಿನ್ನ
ಇನ್ನು ಎಂದೆಂದಿಗೂ
ನಿನ್ನನೆಂದೆಂದಿಗೂ
ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ
ನಿನ್ನಾಣೆ
ನನ್ನಾಣೆ ನಿನ್ನಾಣೆ
ಹೆಣ್ಣು: ದೇವರೇ ಬಂದು
ಬೇಡಿಕೊ ಎಂದು
ಕಣ್ಮುಂದೆ ನಿಂತಾಗ ನಾನು
ಬೇಡೆನು ಏನೂ
ನೀನಿರುವಾಗ
ಹೊಸ ಆಸೆ ನನಗೇಕೆ ಇನ್ನು
ಗಂಡು: ಸೂರ್ಯನ ಆಣೆ
ಚಂದ್ರನ ಆಣೆ
ಎದೆಯಲ್ಲಿ ನೀ ನಿಂತೆ ಜಾಣೆ
ಪ್ರಾಣವು ನೀನೆ
ದೇಹವು ನಾನೆ
ಈ ತಾಯಿ ಕಾವೇರಿ ಆಣೆ
ಹೆಣ್ಣು: ಈ ತಾಯಿ ಕಾವೇರಿ ಆಣೆ
ಗಂಡು: ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ
ನಿನ್ನಾಣೆ
ನನ್ನಾಣೆ ನಿನ್ನಾಣೆ
ಹೆಣ್ಣು: ಒಲಿದ ನಿನ್ನ
ಬಿಡೆನು ಚಿನ್ನ
ಇನ್ನು ಎಂದೆಂದಿಗೂ
ನಿನ್ನನೆಂದೆಂದಿಗೂ
ಗಂಡು: ಕನಸಲೂ ನೀನೇ
ಹೆಣ್ಣು: ಮನಸಲೂ ನೀನೇ
ಗಂಡು: ನಿನ್ನಾಣೆ
ಹೆಣ್ಣು: ನಿನ್ನಾಣೆ
ಗಂಡು: ನಿನ್ನಾ…….ಣೆ
ಹೆಣ್ಣು: ನಿನ್ನಾ……ಣೆ
ಗಂಡು+ಹೆಣ್ಣು: ಆಹಾಹಾ…..ಆಹಾಹಾ…ಆಹಾಹಾ…ಆಹಾಹಾ