ಚಿತ್ರ: ವಸಂತಗೀತ (1980)
ಗಾಯಕರು: ಡಾ. ರಾಜಕುಮಾರ್
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ. ರಂಗರಾವ್
**********************************************************************************************************************************
ಕಣ್ಣಲ್ಲಿ ಏನೋ
ಮಿಂಚೊಂದು ಕಂಡಿತಲ್ಲ……
ನಿನ್ನಾಸೆ ಏನೋ
ನಾನಿಂದು ಕಾಣೆನಲ್ಲ…..
ಕೋಪವೋ…….
ತಾಪವೋ…
ಕೋಪವೋ ತಾಪವೋ
ನಡುಗಿದೆ ತುಟಿ ಏತಕೇ……
ಕಣ್ಣಲ್ಲಿ ಏನೋ
ಮಿಂಚೊಂದು ಕಂಡಿತಲ್ಲ…
ಒಳ್ಳೆ ವಯಸು
ಒಳ್ಳೆ ಸೊಗಸು
ಏಕೆ ಹೀಗಾಯ್ತು ಮನಸು
ಕಣ್ಣು ಚನ್ನ
ಬಣ್ಣ ಚೆನ್ನ
ನಾ ಕಾಣೆ ಹೀಗೇಕೆ ಮುನಿಸು…….. ಹೋ
ಒಳ್ಳೆ ವಯಸು
ಒಳ್ಳೆ ಸೊಗಸು
ಏಕೆ ಹೀಗಾಯ್ತು ಮನಸು
ಕಣ್ಣು ಚನ್ನ
ಬಣ್ಣ ಚೆನ್ನ
ನಾ ಕಾಣೆ ಹೀಗೇಕೆ ಮುನಿಸು
ಈ ರೋಷವೋ
ಆವೇಷವೋ
ಈ ದ್ವೇಷವೋ
ಆಕ್ರೋಶವೋ
ಚೆಲುವೆಯೆ ನಿನಗೇತಕೇ…..ಏಏಏಏ
ಕಣ್ಣಲ್ಲಿ ಏನೋ
ಮಿಂಚೊಂದು ಕಂಡಿತಲ್ಲ
ನಿನ್ನಾಸೆ ಏನೋ
ನಾನಿಂದು ಕಾಣೆನಲ್ಲ
ಚೆಲುವೆ ಮೊಗದಿ
ಗೆಲುವ ಕಂಡೆ
ಎಲ್ಲಿ ಏನಾಯ್ತೋ ಕಾಣೆ
ಗೆಲುವ ಹಿಂದೆ
ಛಲವ ಕಂಡೆ
ಅಮ್ಮಮ್ಮ ನೀನೆಂತ ಜಾಣೆ………. ಹೇ.
ಚೆಲುವೆ ಮೊಗದಿ
ಗೆಲುವ ಕಂಡೆ
ಎಲ್ಲಿ ಏನಾಯ್ತೋ ಕಾಣೆ
ಗೆಲುವ ಹಿಂದೆ
ಛಲವ ಕಂಡೆ
ಅಮ್ಮಮ್ಮ ನೀನೆಂತ ಜಾಣೆ
ನಿನ್ನಾಸೆಯ
ನಾ ಬಲ್ಲೆನು
ಇನ್ನಾರನು ನಾ ಒಲ್ಲೆನು
ಸರಸಕೆ ಬರಲಾರೆಯಾ
ಹೇಳು ಬರಲಾರೆಯಾ
ನಿನ್ನಂತ ನೂರು
ಹೆಣ್ಣನ್ನು ನಾನು ಬಲ್ಲೇ..ಏಏಏಏ
ನನ್ನಲ್ಲಿ ಇನ್ನು
ನಿನ್ನಾಟ ಸಾಗದಲ್ಲೇ…
ಬಳಿಗೆ ಬರುವ
ಮನವ ಗೆಲುವ
ಆಸೆ ನನ್ನಲ್ಲಿ ಬಂತೇ
ಸರದಿಂದ
ನಿನ್ನ ಬೆರೆವೆ
ಬಾ ಹೇಳು ಇನ್ನೇಕೆ ಚಿಂತೆ…….. ಹೇ
ಬಳಿಗೆ ಬರುವ
ಮನವ ಗೆಲುವ
ಆಸೆ ನನ್ನಲ್ಲಿ ಬಂತೇ
ಸರಸದಿಂದ
ನಿನ್ನ ಬೆರೆವೆ
ಬಾ ಹೇಳು ಇನ್ನೇಕೆ ಚಿಂತೆ
ನಿನಗಾಗಿಯೆ
ನಾನಿಲ್ಲವೆ
ನನ್ನಾಸೆಯು
ನಿನಗಿಲ್ಲವೆ
ನಿಜವನು ನುಡಿ ಸುಂದರಿ……ಈಈಈ
ನಿನ್ನಂತ ನೂರು
ಹೆಣ್ಣನ್ನು ನಾನು ಬಲ್ಲೇ …
ನನ್ನಲ್ಲಿ ಇನ್ನು
ನಿನ್ನಾಟ ಸಾಗದಲ್ಲೇ ….