Mind Sharing?

ಚಿತ್ರ: ಗಾಳಿಪಟ (2008)
ಗಾಯನ: ವಿಜಯ್ ಪ್ರಕಾಶ್
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಹೃದಯಶಿವ

**************************************************************************************

ಕವಿತೆ ಕವಿತೆ
ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ
ನೀನೇಕೆ ರಾಗದಲಿ ಬೆರೆತೆ
ನನ್ನ…….ದೆಯ ಗೂಡಲ್ಲಿ ಕವಿತೆಗಳ ಸಂತೆ
ಓ….. ಒಲವೆ ನೀ ತಂದ ಹಾಡಿಗೆ ನಾ ಸೋತೆ
ಕವಿತೆ ಕವಿತೆ
ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ
ನೀನೇಕೆ ರಾಗದಲಿ ಬೆರೆತೆ
ಅವಳು ಬರಲು
ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲಾ
ದಡದಾಟೊ ಅಲೆಗಳಲು ನಲುಮೆ
ಹೊ……….ಮ್ಮುತಿದೆ ರಾಗದಲಿ ಸ್ವರಮೀರೊ ತಿಮಿರು
ಚಿ………..ಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು
ಅವಳು ಬರಲು
ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲಾ
ದಡದಾಟೊ ಅಲೆಗಳಲು ನಲುಮೆ
ಮುಗಿಲ ಹೆಗಲ
ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ
ಎದೆ ಬಾಗಿಲಿಗೆ ಬಂತೊ ಪ್ರಣಯ
ಉ……….ನ್ಮಾದ ತಾನಾಗಿ ಹಾಡಾಗೊ ಸಮಯ
ಏ………….ಕಾಂತ ಕಲ್ಲನ್ನು ಮಾಡುವುದೊ ಕವಿಯ
ಮುಗಿಲ ಹೆಗಲ
ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ
ಎದೆ ಬಾಗಿಲಿಗೆ ಬಂತೊ ಪ್ರಣಯ
Mind Sharing?