Mind Sharing?

ಚಿತ್ರ: ಚಂದನದ ಗೊಂಬೆ (1979)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್

**********************************************************************************************************************************

ಗಂಡು: ಮನೆಯನು ಬೆಳಗಿದೆ ಇಂದು
ನೀ ಬಂದು
ಸುಖ ತಂದು
ಮನೆಯನು ಬೆಳಗಿದೆ ಇಂದು
ನೀ ಬಂದು
ಸುಖ ತಂದು
ಕಣ್ಣಲಿ ಕಲೆತೆ
ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋದೆ
ಹೆಣ್ಣು: ಮನವನು ತುಂಬಿದೆ ಇಂದು
ನೀ ಬಂದು
ಹಿತ ತಂದು
ಕಣ್ಣಲಿ ಕಲೆತೆ
ಉಸಿರಲಿ ಬೆರೆತೆ
ನೀನು ನನ್ನಲ್ಲೇ
ಸೇರಿ ಹೋದೆ
ಗಂಡು: ಮನೆಯನು ಬೆಳಗಿದೆ ಇಂದು
ನೀ ಬಂದು
ಸುಖ ತಂದು
ಹೆಣ್ಣು: ಬೇರೆ ಏನು ಬೇಡದ ಹಾಗೆ
ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ
ಈ ನನ್ನ ಒಲವ
ಸವಿಯಲ್ಲಿ ಕರಗಿ ಹೋದೆ
ಗಂಡು: ಬೇರೆ ಏನು ಕಾಣದ ಹಾಗೆ
ಮಾಯವಾ ನೀ ಮಾಡಿದೆ
ಈ ನಿನ್ನ ರೂಪ
ನನ್ನೆದೆಯ ದೀಪ
ಆದಂದೇ ಸೋತು ಹೋದೆ
ಹೆಣ್ಣು: ನಾನಂದೆ ಸೋತು ಹೋ…..ದೆ
ಮನವನು ತುಂಬಿದೆ ಇಂದು
ನೀ ಬಂದು
ಹಿತ ತಂ…..ದು
ಗಂಡು: ಕಣ್ಣಲಿ ಕಲೆತೆ
ಉಸಿರಲಿ ಬೆರೆತೆ
ಹೆಣ್ಣು: ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು
ನೀ ಬಂದು
ಹಿತ ತಂದು
ಗಂಡು: ಆ…….ಅಹ
ಹೆಣ್ಣು: ಆ……..ಲ ಲ ಲ ಲಾ
ಗಂಡು: ಲ ಲ ಲ ಲಾ
ಹೆಣ್ಣು: ಲ ಲ ಲ
ಗಂಡು: ಲ ಲ ಲ
ಹೆಣ್ಣು: ಲ ಲ ಲ
ಗಂಡು: ಲ ಲ ಲ
ಗಂಡು: ನೂರು ಜನುಮ
ಮಾಡಿದ ಪುಣ್ಯ
ನಿನ್ನನು ನಾ ಹೊಂದಿದೆ
ಹೆಣ್ಣು: ನೀ ನೀಡಿ ಹರುಷ
ನೂರಾರು ವರುಷ
ಬದುಕುವ
ಬಯಕೆ ತಂದೆ
ಗಂಡು: ನೋಡಿ ನೋಡಿ
ತಣಿಯದೆ ಮನವು
ದಣಿಯದೆ
ಹಾಡಿ ಕುಣಿದಿದೆ
ಹೆಣ್ಣು: ಬಾಳೆಲ್ಲ ಹೀಗೆ
ಬಳಿಯಲ್ಲೆ ಇರುವ
ಹೊನ್ನಾಸೆ ನೀನು ತಂದೆ
ಗಂಡು: ನೀ ನನ್ನ ಜೀವವಾದೆ
ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು
ಹೆಣ್ಣು: ಕಣ್ಣಲಿ ಕಲೆತೆ
ಗಂಡು: ಉಸಿರಲಿ ಬೆರೆತೆ
ಗಂಡು+ಹೆಣ್ಣು: ನೀನು ನನ್ನಲ್ಲೇ
ಸೇರಿ ಹೋದೆ
ಮನವನು ತುಂಬಿದೆ ಇಂದು
ನೀ ಬಂದು
ಹಿತ ತಂದು
ಹೆಣ್ಣು: ಲಾ ಲಾ ಲ
ಗಂಡು: ಲ ಲ ಲಾ ಲ
ಹೆಣ್ಣು: ಲಾ ಲಾ ಲ
ಗಂಡು: ಲಾ ಲ ಲಾ ಲ
Mind Sharing?