ಚಲನಚಿತ್ರ: ನಾ ನಿನ್ನ ಬಿಡಲಾರೆ (1979)
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಗಂಡು: ಹೇ ಹೇ ಹೇ ಹೇ
ಹೆಣ್ಣು: ಆಆಆ…. ಆಹಾ ಹಾಹಾ
ಗಂಡು: ಹಾ
ಹೆಣ್ಣು: ಆ
ಗಂಡು: ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇಏಏಏಏ
ಹೆಣ್ಣು: ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇಏಏಏಏ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆಏಏಏಏ
ಗಂಡು: ನನಗಾಗಿ ಹೆಣ್ಣಾಗಿ ಬಂದೆ
ನನ್ನಲ್ಲಿ ನಿನ್ನಾಸೆ ತಂದೆ ಹಾಆಆಆಆ
ಹಗಲಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ
ನೆನಪಲ್ಲೆ ನಾ ಸೋತು ಹೋದೆ
ಹೆಣ್ಣು: ಸಂಗಾತಿ ನೀನಾಗಿ ಬಂದೆ
ಸಂತೋಷ ಬಾಳಲ್ಲಿ ತಂದೆ ಏಏಏಏಏ
ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ
ನೆನಪಿಂದ ನಾ ನೊಂದು ಹೋದೆ
ಗಂಡು: ಇನ್ನೆಂದು ಈ ಚಿಂತೆ ನಿನಗಿಲ್ಲವೆ
ನಾನು (ನಗು) ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇಏಏಏಏ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆಏಏಏಏ
ಹೆಣ್ಣು: ಲತೆಯಲ್ಲಿ ಹೂವಾಗಿ ನಾನು
ಮರಿದುಂಬಿ ಅಂದಾಗಿ ನೀನುಊಊಊ
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ
ಆನಂದ ಹೊಂದೋಣವೇನು
ಗಂಡು: ಬಾನಾಡಿ ನಾವಾಗಿ ಹಾರಿ
ಬಾನಲ್ಲಿ ಒಂದಾಗಿ ಸೇರಿಈಈಈಈ
ಹೊಸ ಆಟ ಆಡೋಣ
ಹೊಸ ನೋಟ ನೋಡೋಣ
ಮುಗಿಲಿಂದ ಜಾರೋಣವೇನು
ಹೆಣ್ಣು: ಎಂದೆಂದು ನೆರಳಾಗಿ ನಾ ಬಾಳುವೆ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಗಂಡು+ಹೆಣ್ಣು: ಕಣ್ಣಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇಏಏಏಏ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಹೀಗೇಕೆ ನನ್ನನ್ನೆ ನೋಡುವೆಏಏಏಏ