Mind Sharing?

ಚಿತ್ರ: ಬೆಂಕಿಯ ಬಲೆ (1983)
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

**********************************************************************************************************************************

ನನಗಾಗಿ ಬಂದ……… ಹೊ
ಆನಂದ ತಂದ………. ಹಾ
ನನಗಾಗಿ ಬಂದ
ಆನಂದ ತಂದ
ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ
ಈ ಮೌನವು ಇನ್ನೇತಕೆ
ನನಗಾಗಿ ಬಂದ
ಆನಂದ ತಂದಆಆಆ
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ನಮಗಾಗೆ ಇಲ್ಲಿ ಮಂಚ ಹಾಕಿದೆ
ಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆ
ಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆ
ಹೇ..ಕಾದಿಹೆ ಪ್ರೇಮದಿ ನಿನ್ನ ಸೇವೆಗೆ
ಮುಗಿಲಿಂದ ಚಂದ್ರ ಇಣುಕಿ ನೋಡಿದೆ
ತಂಗಾಳಿ ತಂಪು ತಂದು ಚೆಲ್ಲಿದೆ
ಈ ಚಳಿ ತಾಳದೇ ತನುವು ನಡುಗಿದೆ
ಪ್ರೀತಿಯ ತೋರುತ ಅಪ್ಪಿಕೊಳ್ಳದೇ
ಹ.. ಬೆಚ್ಚುವೆ ಹೀಗೇಕೆ
ಹ.. ಕೆನ್ನೆಯು ಕೆಂಪೇಕೆ
ತುಟಿಯ ಬಳಿ ತುಟಿಗಳನು ನಾನು ತಂದಾಗ ಹೊ….
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೋಯ್.. ಹೋಯ್.. ಹೋಯ್.. ಹೋಯ್..
ಹೆಣ್ಣೇ ಮಾತಾಡು ಬಾ.. ಬಾ.. ಬಾಬಾ..
ಕಣ್ಣಲ್ಲಿ ನೂರಾಸೆ ಸೇರಿಕೊಂಡಿದೆ
ಮೈಯಲ್ಲ ಬಿಸಿಯೇರಿ ನಿನ್ನ ಕೂಗಿದೆ
ಕಾತುರ ತಾಳದೆ ಮನವು ನೊಂದಿದೆ
ಹಾ.. ಆತುರ ನನ್ನೆದೆ ತುಂಬಿಕೊಂಡಿದೆ
ಅನುರಾಗದಾನಂದ ಹೃದಯ ತುಂಬಿದೆ
ಮುತ್ತೊಂದು ಬೇಕೆಂದು ತುಟಿಯ ಕೇಳಿದೆ
ಜೀವವು ನಿಲ್ಲದು ಬಯಕೆ ಮುಗಿಯದೇ
ಬೇಡುವೆ ಬಾರೆಯಾ ಬೇಗ ಸನಿಹಕೆ
ಅಂದದ ಹೆಣ್ಣೊಂದು
ಅರೆ ಹಾ.. ಬಳಿಯಲಿ ನಿಂತಾಗ
ಕೈಯ ಕಟ್ಟಿ ಕುಳಿತಿರಲು ಕಲ್ಲು ನಾನಲ್ಲ.. ಹಾ.. ಹ.. ಹ.. ಹ..
ನನಗಾಗಿ ಬಂದ
ಆನಂದ ತಂದ
ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ
ಈ ಮೌನವು ಇನ್ನೇತಕೆ
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೊ.. ಹೊ.. ಹೊ.. ಹೊ.. ಹೊ.. ಹೊ.. ಹೊ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ
Mind Sharing?