Mind Sharing?

ಚಿತ್ರ: ಹೊಸ ಬೆಳಕು (1982)
ಗಾಯಕರು: ಡಾ.ರಾಜಕುಮಾರ್ ಎಸ್. ಜಾನಕಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್

**********************************************************************************************************************************

ಹೆಣ್ಣು: ನೀ…ನಾ….ದೆ ಬಾಳಿಗೆ ಜ್ಯೋತಿ
ನಾ… ಕಂಡೆ ಕಾಣದ ಪ್ರೀತಿ
ನೀ…ನಾ…ದೆ ಬಾಳಿಗೆ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ
ಕನಸು ನೂರಾಗಿ
ಮನಸು ಹೂವಾಗಿ
ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಗಂಡು: ಬಾ ಎನ್ನ ಬಾಳಿನ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
ಬಾ ಎನ್ನ ಬಾ‌..ಳಿನ ಜ್ಯೋ…ತಿ
ಬಾ ನನ್ನ ಪ್ರೇಮದ ಕಾಂತಿ
ಮನಸು ಹೂವಾಗಿ
ಕನಸು ನೂರಾಗಿ
ಮನಸು ಹೂವಾಗಿ
ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಹೆಣ್ಣು: ರವಿ ಮೂಡಿ ಆಗಸದಲ್ಲಿ
ಬೆಳಕನ್ನು ಚೆಲ್ಲಿದ ಹಾಗೆ
ಇರುಳಾದ ಬಾಳಲಿ ಬಂದೆ
ಸಂತೋಷ ಸಂಭ್ರಮ ತಂದೆ
ಈ ಜೀವವು……….
ನಲಿದಾಡಿದೆಏಏಏಏಏ
ಈ ಜೀವವು
ನಲಿದಾಡಿದೆ
ಗಂಡು: ಇನ್ನು ಎಂದೆಂದು
ನೋವು ನಿನಗಿಲ್ಲ
ಇನ್ನು ಎಂದೆಂದು
ನೋವು ನಿನಗಿಲ್ಲ
ಬಿಸಿಲಲ್ಲಿ ನೆರಳಾಗಿ
ಹಿತ ನೀಡುವೆ….
ಹೆಣ್ಣು: ನೀ…ನಾ…ದೆ ಬಾಳಿಗೆ ಜ್ಯೋ….ತಿ
ಗಂಡು: ಬಾ ನನ್ನ ಪ್ರೇಮದ ಕಾಂತಿ
ಗಂಡು: ಹೊಸ ರಾಗ ಹಾಡಲು ನೀನು
ಹೊಸ ಲೋಕ ಕಂಡೆನು ನಾನು
ಹೊಸ ದಾರಿ ನೋಡಿದೆಯೇ…ನು
ಜೊತೆಯಾಗಿ ಬರುವೆಯ ಇನ್ನು
ನನ್ನಾಸೆಯ….
ಪೂರೈಸೆಯಾ ಆಆಆಆ
ನನ್ನಾಸೆಯ
ಪೂ…ರೈಸೆಯಾ
ಹೆಣ್ಣು: ನಿನ್ನ ಉಸಿರಾಗಿ
ಬಾಳ ಹಸಿರಾಗಿ
ನಿನ್ನ ಉಸಿರಾಗಿ
ಬಾಳ ಹಸಿರಾಗಿ
ಎಂದೆಂದು ಒಂದಾಗಿ
ನಾ ಬಾಳುವೆ…ಏ…
ಗಂಡು: ಬಾ ಎನ್ನ ಬಾಳಿನ ಜ್ಯೋತಿ
ಹೆಣ್ಣು: ನಾ ಕಂಡೆ ಕಾಣದ ಪ್ರೀತಿ
ಗಂಡು+ಹೆಣ್ಣು: ಮನಸು ಹೂವಾಗಿ
ಕನಸು ನೂರಾಗಿ
ಮನಸು ಹೂವಾಗಿ
ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಹೆಣ್ಣು: ಆ…..ಆಆಆ……
ಗಂಡು: ಆ…..ಆಆಆಆ…
ಹೆಣ್ಣು: ಆ…..ಆಆಆ……
ಗಂಡು: ಆ…..ಆಆಆಆ…
Mind Sharing?