ಚಿತ್ರ: ವಸಂತಗೀತ (1980)
ಗಾಯಕರು: ಡಾ. ರಾಜಕುಮಾರ್
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ. ರಂಗರಾವ್
**********************************************************************************************************************************
ನೀನಾಡೊ ಮಾತೆಲ್ಲ ಚಂದ
ನಿನ್ನಿಂದ ಈ ಬಾಳೆ ಅಂದ
ಹೊಯ್ ಹೊಯ್ ಹೊಯ್
ನೀನಾಡೊ ಮಾತೆಲ್ಲ ಚಂದ
ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ
ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ
ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಾಗಿದೆ
ತನು ಹೂವಿನ ಒಡಲಾಗಿದೆ…..ಹೇ…..
ನೀನಾಡೊ ಮಾತೆಲ್ಲ ಚಂದ
ನಿನ್ನಿಂದ ಈ ಬಾಳೆ ಅಂದ……..
ಕಂದ ನೀನಂದು
ಕಾಣದಾದಾಗ
ಬಾಳೆ ಇರುಳಾಯಿತು
ನನ್ನ ಈ ಜೀವ
ತಾಳದೆ ನೋವ
ಸಾಕು ಸಾಕಾಯಿತು
ಹೇ……..ಹೆಹೆ ಹೇಹೇ
ರಾ……..ರಾರಾ ರಾರಾ
ಆ………ಆಹಾ ಆಹಾ
ಏ… ಏಹೆ ಏಹೆ
ನೀನು ನನ್ನಿಂದ
ದೂರವಾದಾಗ
ಕಂದ ನಾ ಉಳಿಯೆನು
ಹೂವ ಕಂಪಂತೆ
ಗಾಳಿ ತಂಪಂತೆ
ರಾಗದಿಂಪಂತೆ
ಸಂಜೆಗೆಂಪಂತೆ
ನನ್ನಲ್ಲಿಯೇ
ಒಂದಾಗಿರು
ಈ ದೇಹಕೆ
ಉಸಿರಾಗಿರು…..ಏಏಏ
ನೀನಾಡೊ ಮಾತೆಲ್ಲ ಚಂದ
ನಿನ್ನಿಂದ ಈ ಬಾಳೆ ಅಂದ
ಇಂಥ ಮುದ್ದಾದ
ಹೆಣ್ಣು ಮಗುವನ್ನು
ಎಂದು ನಾ ಕಾಣೆನು
ನಿನ್ನ ಈ ವೇಷ
ಮೊದಲು ಕಂಡಾಗ
ನಾನೆ ಬೆರಗಾದೆನು
ಓಹೋಹೋ……ಓಹೋ
ಅಹಹಾ……..ಆಹಾ
ದಾಡಿ ಬಿಳುಪಾಗಿ
ಬೆನ್ನು ಬಿಲ್ಲಾಗಿ
ನಾನು ಮುದಿಯಾದೆನು
ಬೇರೆ ಮಾಡೋರು
ಯಾರು ಇನ್ನಿಲ್ಲ
ವೇಷ ನಮದೆಂದು
ಯಾರು ಹೇಳಲ್ಲ
ನಿಮ್ಮಮ್ಮನೇ
ಎದುರಾದರು
ನಮ್ಮಿಬ್ಬರ
ಗುರುತಾಗದು…..ಏ……
ನೀನಾಡೊ ಮಾತೆಲ್ಲ ಚಂದ
ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ
ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ
ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಾಗಿದೆ
ತನು ಹೂವಿನ ಒಡಲಾಗಿದೆ
ನೀನಾಡೊ ಮಾತೆಲ್ಲ ಚಂದ
ನಿನ್ನಿಂದ ಈ ಬಾಳೆ ಅಂದ