ಚಲನಚಿತ್ರ: ಚಲಿಸುವ ಮೋಡಗಳು (1982)
ಗಾಯಕರು: ಡಾ. ರಾಜ್ ಕುಮಾರ್ ಮತ್ತು ಎಸ್. ಜಾನಕಿ
ಸಂಗೀತ : ರಾಜನ್_ ನಾಗೇಂದ್ರ
ಸಾಹಿತ್ಯ : ಚಿ. ಉದಯಶಂಕರ್
**********************************************************************************************************************************
ಗಂಡು: ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನಾ ನಿನ್ನ ಕಣ್ಣಾಗಿ
ನೀನಾಡೊ ನುಡಿಯಾಗಿ
ಗಿಡವಾಗಿ ಮರವಾಗಿ
ನೆರಳಾಗಿ ಜೊತೆಯಾಗಿ
ನಾನಿರುವೆ.. ಏಏಏ..
ಹೆಣ್ಣು: ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನಾ ನಿನ್ನ ಕಣ್ಣಾಗಿ
ನೀನಾಡೊ ನುಡಿಯಾಗಿ
ಗಿಡವಾಗಿ ಮರವಾಗಿ
ನೆರಳಾಗಿ ಜೊತೆಯಾಗಿ
ನಾನಿರುವೆಏಏಏ
ಗಂಡು: ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನ..ಲ್ಲೆ
ಗಂಡು: ಬಳಿಯಲೇ ಬಂಗಾರ ಇರುವಾಗ
ಅದನು ನೋಡದೆಏಏಏಏಏಏ
ಅಲೆಯುತ ದಿನ ಬಳಲಿದೆ
ಕಣ್ಣೀಗ ತೆರೆಯಿತುಊಊಊಊಊ
ಹೆಣ್ಣು: ಬಯಸಿದ ಸೌಭಾಗ್ಯ ಕೈಸೇರಿಈಈಈಈ
ಹರುಷ ಮೂಡಿತು
ಒಲವಿನ ಲತೆ ಚಿಗುರಿತು
ಕನಸಿನ್ನು ಮುಗಿಯಿತುಊಊಊಊ
ಗಂಡು: ಇನ್ನೆಂದು ನಿನ್ನನ್ನು
ಚೆಲುವೆ ಬಿಡಲಾರೆ ನಾ
ಹೆಣ್ಣು: ಓ ಓ ಓ ಓ ಬಾಗಿಲಿಗೆ ಹೊಸಿಲಾಗಿ
ತೋರಣದ ಹಸಿರಾಗಿ
ಪೂಜಿಸುವ ಹೂವಾಗಿ
ಇಂಪಾದ ಹಾಡಾಗಿ
ಮನಸಾಗಿ ಕನಸಾಗಿ
ಬಾಳೆಲ್ಲ ಬೆಳಕಾಗಿ
ನಾ ಬರುವೇಏಏಏಏಏಏ
ಗಂಡು: ನೀನೆಲ್ಲೋ ನಾನಲ್ಲೆ
ಹೆಣ್ಣು: ಈ ಜೀವ ನಿನ್ನ..ಲ್ಲೆ