ಚಿತ್ರ: ಕಾಮನಬಿಲ್ಲು(1983)
ಗಾಯನ: ಸಿ. ಅಶ್ವಥ್
ಸಾಹಿತ್ಯ: ಕುವೆಂಪು
ಸಂಗೀತ: ಉಪೇಂದ್ರಕುಮಾರ್
**********************************************************************************************************************************
ಓ………..ಓ ಓ
ಓಹೋ ಓ……..ಓ ಓ ಓ
ನೇಗಿಲ ಹಿಡಿದ ಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ………..
ಓ……………
ನೇಗಿಲ ಹಿಡಿದ ಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ……..
ಓ……………
ಫಲವನ್ನು ಬಯಸದೆ ಸೇವೆಯ ಪೂಜೆಯು
ಕರ್ಮವೇ ಇಹಪರ ಸಾಧನವು…….
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೆ ಭೋಗಿ……
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಏ………………….ಹೇ ಹೇ ಹೇ
ಲೋಕದೊಳೇನೆ ನಡೆಯುತಲಿರಲಿ
ತನ್ನಿ ಕಾರ್ಯಾವ ಬಿಡನೆಂದು..ಓ ಓ ಓ ಓ
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು……..
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು……..
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೇ ಇಲ್ಲ…..
ಬಿತ್ತುಳುವುದನವ ಬಿಡುವುದೇ ಇಲ್ಲ……
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಏ………………….ಹೇ ಹೇ ಹೇ
ಯಾರು ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು
ಯಾರು ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು……….
ಹೆಸರನು ಬಯಸದೆ ಅತಿಸುಖ ಕೆಲಸದೆ
ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ…….
ಓ……………
ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ……
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ