ಚಿತ್ರ: ಬಂಧನ(1984)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
**********************************************************************************************************************************
ಹ್ಮ್ ಹ್ಮ್ ಹ್ಮ್ ಹ್ಮ್…..ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ …….ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ
ಸಿಂಧೂರ ಬಿಂದು
ನಗಲಮ್ಮ ಎಂದು
ಎಂದೆಂದು ಇರಲಮ್ಮ
ಈ ದಿವ್ಯ ಬಂಧ
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ
ಒಲವೆಂಬ ಲತೆಯು
ತಂದಂತ ಹೂವು
ಮುಡಿಯೇರೆ ನಲಿವು
ಮುಡಿಜಾರೆ ನೋವು
ಕೈಗೂಡಿದಾಗ
ಕಂಡಂಥ ಕನಸು
ಅದೃಷ್ಟದಾಟ
ತಂದಂಥ ಸೊಗಸು
ಪ್ರೀತಿ ನಗುತಿರಲಿ
ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ
ಬಾಳು ಬೆಳಗಿರಲಿ
ನೀವೆಂದು ಇರಬೇಕು
ಸಂತೋಷದಿಂದ
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ
ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷವುಂಟು
ನಿನ್ನ ಹರುಷದಲಿ
ನನ್ನಾ ಉಸಿರಿರಲಿ
ನಿನ್ನ ಹರುಷದಲಿ
ನನ್ನಾ ಉಸಿರಿರಲಿ
ನನ್ನೆಲ್ಲ ಹಾರೈಕೆ
ಈ ಹಾಡಿನಿಂದ
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ
ಸಿಂಧೂರ ಬಿಂದು
ನಗಲಮ್ಮ ಎಂದು
ಎಂದೆಂದು ಇರಲಮ್ಮ
ಈ ದಿವ್ಯ ಬಂಧ
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು
ಆನಂದದಿಂದ..
ಆನಂದದಿಂದ..
ಆನಂದದಿಂದ