ಚಿತ್ರ: ಚಕ್ರವರ್ತಿ (2017)
ಗಾಯಕರು: ಅರ್ಮಾನ್ ಮಲಿಕ್ ಮತ್ತು ಶ್ರೇಯ ಘೋಷಾಲ್
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಡಾ: ವಿ. ನಾಗೇಂದ್ರ ಪ್ರಸಾದ್
**********************************************************************************************************************************
ಗಂಡು: ಒಂದು ಮಳೆ ಬಿಲ್ಲು
ಒಂದು ಮಳೆ ಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ
ಏನೇನೋ ಮಾತಾಡಿವೆ
ಭಾವನೆ ಬಾಕಿ ಇದೆ …
ತೇಲಿ ನೂರಾರು ಮೈಲಿಯು ಸೇರಲು
ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡೂ ಸಹಆ ಆ ಆ ಆ ಆ ಆ
ಏನನೋ ಮಾತಾಡಿವೆ
ಭಾವನೆ ಬಾಕಿ ಇದೆ
ಒಂದು ಮಳೆ ಬಿಲ್ಲು
ಒಂದು ಮಳೆ ಮೋಡ
ಹೇಗೋ ಜೊತೆಯಾಗಿ ತುಂಬ ಸೊಗಸಾಗಿ
ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಹೆಣ್ಣು: ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೆ ಎಷ್ಟೋ ಆಸೆಗಳಿವೆ
ಗಂಡು: ಎಂಥ ಆವೇಗ ಈ ತವಕ
ಸೇರೋ ಸಲುವಾಗಿ
ಎಲ್ಲ ಅತಿಯಾಗಿ
ಹೆಣ್ಣು: ಎಲ್ಲೂ ನೋಡಿಲ್ಲ ಈ ತನಕ
ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ
ಗಂಡು: ಏನನೋ ಮಾತಾಡಿವೆ
ಯಾತಕೆ ಹೀಗಾಗಿದೆ
ಒಂದು ಮಳೆ ಬಿಲ್ಲು
ಒಂದು ಮಳೆ ಮೋಡ
ಹೆಣ್ಣು: ನಾಚುತಲಿವೆ ಯಾಕೋ ಕೈಯ್ಯ ಬಳೆ
ಮಂಚ ನೋಡುತಿದೆ ಬೀಳೋ ಬೆವರ ಮಳೆ
ಗಂಡು: ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ
ದೀಪ ಮಲಗುತಿದೆ ನೋಡಿ ಈ ರಗಳೆ
ಹೆಣ್ಣು: ತುಂಬಾ ಹೊಸದಾದ ಈ ಕಥನ
ಒಮ್ಮೆ ನಿಶಬ್ಧ
ಒಮ್ಮೆ ಸಿಹಿಯುದ್ದ
ಗಂಡು: ಎಲ್ಲೂ ಕೇಳಿಲ್ಲ ಈ ಮಿಥುನ
ಪ್ರೀತಿಲಿ ಈ ಜೀವ ಒಂದಾಗಿವೆ
ಹೆಣ್ಣು: ಏನೇನೋ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಮಾತಲೇ ಮುದ್ದಾಡಿವೆ
ಗಂಡು: ಒಂದು ಮಳೆ ಬಿಲ್ಲು
ಹೆಣ್ಣು: ಒಂದು ಮಳೆ ಮೋಡ
ಗಂಡು: ಹೇಗೋ ಜೊತೆ ಆಗಿ
ಹೆಣ್ಣು: ತುಂಬ ಸೊಗಸಾಗಿ
ಗಂಡು: ಏನೇನೋ ಮಾತಾಡಿವೆ
ಹೆಣ್ಣು: ಭಾವನೆ ಬಾಕಿ ಇದೆ
ಹೆಣ್ಣು: ಆ ಆ ಆ ಆ ಆ
ಆ ಆ ಆ ಆ ಆ
ಆ ಆ ಆ ಆ ಆ
ಆ ಆ ಆ ಆ ಆ