Mind Sharing?

ಚಿತ್ರ : ಕೋಟಿಗೊಬ್ಬ-2
ಗಾಯಕರು: ವಿಜಯ್ ಪ್ರಕಾಶ್, ಶ್ರೇಯ ಘೋಷಾಲ್
ಸಂಗೀತ: ಡಿ. ಇಮ್ಮಾನ್
ಸಾಹಿತ್ಯ: ಡಾ: ವಿ. ನಾಗೇಂದ್ರ ಪ್ರಸಾದ್

*******************************************************************************************************************************

ಹೆಣ್ಣು:       ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಒಂದೆ ಸಮನೆ ನಿನ್ನಾ ನೋಡುತಿದ್ದ ಮೇಲು
ತುಂಬ ಸಲಿಗೆಯಿಂದ ಬೆರೆತು ಹೋದ ಮೇಲು
ಪಕ್ಕದಲ್ಲೆ ಕುಳಿತುಕೊಂಡು
ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದ ಮೇಲೂಊಊಊಊ
ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇಏಏಏಏ
ಗಂಡು:     ಮುಂಜಾನೆ ನನ್ನ ಪಾಲಿಗಂತು ಸಾಲೊಲ್ಲ
ಮುಸ್ಸಂಜೆ ತನಕ ಸನಿಹವಂತು ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೆ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲ ಭೇಟಿ ನಡೆದ ಮೇಲೂಊಊಊಊ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೆಏಏಏಏಏ
ಹೆಣ್ಣು:        ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ
ಸಲ್ಲಾಪದಲ್ಲು ಇರುವ ಸುಖವು ಸಾಲೋಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೊಲ್ಲ
ಏಳು ಸ್ವರವು ಮುಗಿದ ಮೇಲು
ಕಾಡುವಂತ ನನ್ನ ನಿನ್ನ
ಯುಗಳಗೀತೆ ಮುಗಿಯೋದಿಲ್ಲಆಆಆಆಆ
ಸಾಲುತಿಲ್ಲವೆ ಸಾಲುತಿಲ್ಲವೆ
ಗಂಡು:      ನಿನ್ನ ಹಾಗೆ ಅಮಲು ಬೇರೆ ಇಲ್ಲವೇ
ಹೆಣ್ಣು:     ಶ್ವಾಸದಲ್ಲಿ ನೀನು ವಾಸವಿದ್ದ ಮೇಲೂ
ನನ್ನ ಹೃದಯವನ್ನು ಹಾಯಗಿ ಕದ್ದ ಮೇಲೂ
ಗಂಡು:     ಎರಡು ಹೃದಯ ಬೆರೆತ ಮೇಲೂ
ಹಾಡು ಮುಗಿದು ಹೋದ ಮೇಲೂ
ಮೌನ ತುಂಬಿ ಬಂದ ಮೇಲೂಊಊಊಊ
ಹೆಣ್ಣು:     ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
Mind Sharing?