Mind Sharing?

ಚಿತ್ರ: ಕವಿರತ್ನ ಕಾಳಿದಾಸ (1983)
ಹಾಡಿದವರು: ರಾಜ್ ಕುಮಾರ್, ವಾಣಿ ಜಯರಾಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್

**********************************************************************************************************************************

ಗಂಡು: ಆಆಆಆಆಆಆಆಆಆ
ಹೆಣ್ಣು: ಆಆಆಆಆಆಆಆ
ಗಂಡು: ಆಆಆಆಆಆಆಆಆಆ
ಹೆಣ್ಣು: ಆಆಆಆಆಆಆಆ
ಗಂಡು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾಆಆಆ ಬಯಕೆ ತುಂಬುವೆ
ಹೆಣ್ಣು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾಆಆಆ ಬಯಕೆ ತುಂಬುವೆ
ಗಂಡು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಗಂಡು: ಕಣ್ಣೆರಡು ಕಮಲಗಳಂತೆ
ಮುಂಗುರುಳು ದುಂಬಿಗಳಂತೆ
ಕಣ್ಣೆರಡು ಕಮಲಗಳಂತೆ
ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ
ನೀ ನಗಲು ಹೂ ಬಿರಿದಂತೆಏಏಏ
ನಾಸಿಕವು ಸಂಪಿಗೆಯಂತೆ
ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆಏಏಏಏಏಏಏಏಏ
ನಡೆಯುತಿರೆ ನಾಟ್ಯದಂತೆ
ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು
ಸೋತೆ ನಾನು
ಹೆಣ್ಣು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಹೆಣ್ಣು: ಗುಡುಗುಗಳು ತಾಳದಂತೆಏಏಏ
ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲಾಆಆಆಆ
ಪನ್ನೀರ ಹನಿಹನಿಯಂತೆ
ಸುರಿವ ಮಳೆ ನೀರೆಲ್ಲ
ಪನ್ನೀರ ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು
ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು
ಸೋತೆ ನಾನು
ಗಂಡು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಹೆಣ್ಣು: ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
ಗಂಡು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ ಹೆಣ್ಣು:(ಆಆಆಆಆಆಆಆಆಆಆ)
ಗಂಡು+ಹೆಣ್ಣು: ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
Mind Sharing?