Mind Sharing?

ಚಿತ್ರ: ಅನುರಾಗ ಅರಳಿತು (1986)
ಗಾಯನ: ಡಾ. ರಾಜಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಸಾರ್ಥಕವಾಯಿತು..
ಸಾರ್ಥಕವಾಯಿತು
ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು
ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು
ನಿನ್ನೀ ಕಂಗಳು ನೈದಿಲೆಯಂತೆ
ಸುಂದರ ಮೊಗವು ತಾವರೆಯಂತೆ
ಮುಂಗುರುಳೇನೋ ದುಂಬಿಗಳಂತೆ
ಒಳಗೇನಿದೆಯೋ ಎಂಬುದೆ ಚಿಂತೆ
ಸಾರ್ಥಕವಾಯಿತು
ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು
ಆ ಸಾವಿತ್ರಿ ನಿನ್ನ ನೋಡಿದರೆ
ಎದೆಯೇ ಒಡೆದು ಸಾಯುತಲಿದ್ದಳು
ಪತಿ ಭಕ್ತಿಯಲಿ ನಿನಗೆಣೆ ಇಲ್ಲ
ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು
ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು
ಕವಿ ವಾಲ್ಮೀಕಿ ಇದ್ದರೆ ಈಗ
ಹೊಸ ಕಾವ್ಯವನೇ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ
ಕಂಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು
ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು
ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು
Mind Sharing?